ʼಯೋಧರ ಆತ್ಮಹತ್ಯೆ‌ʼ ಹೇಳಿಕೆ ಸರಿಯಲ್ಲ: ಬ್ರಿಟನ್ ಸಚಿವರ ಸ್ಪಷ್ಟನೆ

Update: 2021-09-06 17:47 GMT

ಲಂಡನ್, ಸೆ.6: ಅಫ್ಗಾನ್ನಿಂದ ಅಮೆರಿಕ ನೇತೃತ್ವದ ಮಿತ್ರಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿರುವ ನಿರ್ಧಾರದಿಂದ ತೀವ್ರ ಆಕ್ರೋಶಗೊಂಡಿದ್ದ ಬ್ರಿಟನ್ನ ಹಲವು ಹಿರಿಯ ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ತನ್ನ ಹೇಳಿಕೆ ಸರಿಯಲ್ಲ ಎಂದು ಬ್ರಿಟನ್ನ ಸಹಾಯಕ ರಕ್ಷಣಾ ಸಚಿವ ಜೇಮ್ಸ್ ಹೀಪೆ ಹೇಳಿದ್ದಾರೆ.

ವಾಸ್ತವವಾಗಿ ನಾನು ಉಲ್ಲೇಖಿಸಿದ್ದ ವಿಷಯ ನಿಖರವಾಗಿಲ್ಲ. ಕಳೆದ ಕೆಲ ದಿನಗಳಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಸರಿಯೇ ಎಂಬುದನ್ನು ನಾವು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ.

  ಈ ಹಿಂದೆ ‘ಸ್ಕೈ ನ್ಯೂಸ್’ನೊಂದಿಗೆ ಮಾತನಾಡಿದ್ದ ಜೇಮ್ಸ್ ಹೀಪೆ, ಅಫ್ಗಾನ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಬ್ರಿಟನ್ನ ಹಲವು ಹಿರಿಯ ಯೋಧರು ಅಫ್ಗಾನ್ನಿಂದ ಅಮೆರಿಕ ನೇತೃತ್ವದ ಮಿತ್ರಪಡೆಗಳ ಗೊಂದಲಮಯ ವಾಪಸಾತಿ ಪ್ರಕ್ರಿಯೆಯಿಂದ ಮತ್ತು ತಾಲಿಬಾನ್ ಗೆಲುವಿನಿಂದ ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಇದು ತೀವ್ರ ಆತಂಕಕಾರಿ ಮತ್ತು ಚಿಂತೆಯ ವಿಷಯವಾಗಿದೆ ಎಂದಿದ್ದರು.

 ಈ ಹೇಳಿಕೆಯನ್ನು ಬ್ರಿಟನ್ ರಕ್ಷಣಾ ಇಲಾಖೆಯ ವಕ್ತಾರರು ನಿರಾಕರಿಸಿದ್ದರು. ಅಫ್ಗಾನ್ ನಲ್ಲಿ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳ ಪಡೆಯಲ್ಲಿದ್ದ ಬ್ರಿಟನ್ 2001ರಿಂದ ತನ್ನ 457 ಯೋಧರನ್ನು ಕಳೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News