ಕಾಂಗೊ: ಉಗ್ರರ ದಾಳಿಯಲ್ಲಿ ಕನಿಷ್ಟ 30 ಮಂದಿ ಮೃತ್ಯು

Update: 2021-09-06 17:48 GMT

ಬುನಿಯಾ, ಸೆ.6: ಕಾಂಗೊ ಗಣರಾಜ್ಯದ ಈಶಾನ್ಯದ ಸಂಘರ್ಷಪೀಡಿತ ಇಟೂರಿ ಪ್ರದೇಶದಲ್ಲಿ ವಾರಾಂತ್ಯ ನಡೆದ ದಾಳಿಯಲ್ಲಿ ಕನಿಷ್ಟ 30 ಮಂದಿ ಹತರಾಗಿದ್ದಾರೆ ಎಂದು ಸ್ಥಳೀಯ ಮತ್ತು ವಿಶ್ವಸಂಸ್ಥೆಯ ಮೂಲಗಳು ಹೇಳಿವೆ.

 ಅಲಾಯ್ಡ ಡೆಮೊಕ್ರಟಿಕ್ ಫೋರ್ಸ್(ಎಡಿಎಫ್)ನ ಜಿಹಾದಿಗಳು ಈ ದಾಳಿ ನಡೆಸಿರುವರೆಂದು ಶಂಕಿಸಲಾಗಿದೆ. ಮಚ್ಚಿನ ಏಟಿನಿಂದಾದ ಗಾಯ ಮತ್ತು ಗುಂಡೇಟು ಬಿದ್ದ ಕನಿಷ್ಟ 30 ಮೃತದೇಹಗಳು ಪೊದೆಗಳ ಎಡೆಯಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕವು ಭಯೋತ್ಪಾದಕ ಗುಂಪು ಎಂದು ಪಟ್ಟಿ ಮಾಡಿರುವ ಎಡಿಎಫ್, ಖನಿಜ ನಿಕ್ಷೇಪ ಹೇರಳವಾಗಿರುವ ಕಾಂಗೊದ ಪೂರ್ವ ಪ್ರಾಂತ್ಯದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಇಲ್ಲಿ ಹಲವು ದಾಳಿಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News