ನೇಪಾಳದಲ್ಲಿ ಭಾರೀ ಮಳೆ: 380ಕ್ಕೂ ಅಧಿಕ ಮನೆಗಳು ಜಲಾವೃತ

Update: 2021-09-06 17:48 GMT

ಕಠ್ಮಂಡು, ಸೆ.6: ನೇಪಾಳದಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದಿಂದ 380ಕ್ಕೂ ಅಧಿಕ ಮನೆಗಳು ನೀರಿನಡಿ ಮುಳುಗಿದ್ದು ಹಲವು ಜನವಸತಿ ಪ್ರದೇಶಗಳಿಗೆ ಭಾರೀ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರವಿವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಠ್ಮಂಡುವಿನ 100ಕ್ಕೂ ಅಧಿಕ ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿಯಿದೆ. ನೇಪಾಲ ಪೊಲೀಸರು, ಸಶಸ್ತ್ರ ಪೊಲೀಸ್ ದಳ ಮತ್ತು ಸೇನೆಯ ಕಾರ್ಯಾಚರಣೆಯಲ್ಲಿ 138ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೆಟ್ರೊಪೊಲಿಟನ್ ಪೊಲೀಸ್ ಕಚೇರಿಯ ವಕ್ತಾರ ಸುಶೀಲ್ ಸಿಂಗ್ ರಾಥೋರ್ ಹೇಳಿದ್ದಾರೆ.

  ಮನೋಹರ ನದಿ ತೀರ, ಕಡಗಾರಿ, ತೇಕು ಮತ್ತು ಬಾಲ್ಕು ಪ್ರದೇಶಗಳಲ್ಲಿ ರಕ್ಷಣೆ ಕಾರ್ಯಾಚರಣೆ ಮುಂದುವರಿದಿದೆ. ಕಠ್ಮಂಡುವಿನಲ್ಲಿ 4 ಗಂಟೆಯೊಳಗೆ 105 ಮಿಮೀ ಮಳೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಬೇತಿನಿ ಗ್ರಾಮದಲ್ಲಿ ರವಿವಾರ ಸಿಡಿಲು ಬಡಿದು 7 ಮಂದಿ ಗಾಯಗೊಂಡಿದ್ದು ಸಿಡಿಲಿನ ಆಘಾತಕ್ಕೆ 12ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News