ಲಿಬಿಯಾ: ಮಾಜಿ ಅಧ್ಯಕ್ಷ ಗಡಾಫಿ ಪುತ್ರ ಜೈಲಿನಿಂದ ಬಿಡುಗಡೆ

Update: 2021-09-06 17:54 GMT

 ಟ್ರಿಪೋಲಿ, ಸೆ.6: ಪ್ರತಿಭಟನಾಕಾರರ ವಿರುದ್ಧ ದೌರ್ಜನ್ಯ ಎಸಗಿದ ಅಪರಾಧಕ್ಕೆ ಜೈಲುಶಿಕ್ಷೆಗೆ ಒಳಗಾಗಿದ್ದ ಲಿಬಿಯಾದ ಮಾಜಿ ಅಧ್ಯಕ್ಷ ಮುಅಮ್ಮರ್ ಗಡಾಫಿಯ ಪುತ್ರ ಸಾದಿ ಗಡಾಫಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.

 2011ರ ದಂಗೆ ಸಂದರ್ಭ ಪದಚ್ಯುತಗೊಂಡಿದ್ದ ಮುಅಮ್ಮರ್ ಗಡಾಪಿ ಬಳಿಕ ಹತರಾಗಿದ್ದರು. ಬಳಿಕ ಸಾದಿ ಗಡ್ಡಾಫಿ ಪಶ್ಚಿಮ ಆಫ್ರಿಕಾಕ್ಕೆ ಪಲಾಯನ ಮಾಡಿದ್ದರು. 2014ರಲ್ಲಿ ಅವರನ್ನು ಮತ್ತೆ ಲಿಬಿಯಾಕ್ಕೆ ಹಸ್ತಾಂತರಿಸಿದ್ದು ಜೈಲುಶಿಕ್ಷೆ ವಿಧಿಸಲಾಗಿತ್ತು.

  2011ರಲ್ಲಿ ಲಿಬಿಯಾದಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆ ಸಂದರ್ಭ ಪ್ರತಿಭಟನಾಕಾರರ ಮೇಲೆ ನಡೆದ ಹಿಂಸಾಚಾರ ಮತ್ತು ದೌರ್ಜನ್ಯ ಹಾಗೂ ಲಿಬ್ಯಾದ ಫುಟ್ಬಾಲ್ ತಂಡದ ತರಬೇತುದಾರರನ್ನು ಹತ್ಯೆ ಮಾಡಿದ ಆರೋಪ ಸಾದಿ ಗಡ್ಡಾಫಿಯ ಮೇಲಿತ್ತು. ಆದರೆ ಫುಟ್ಬಾಲ್ ಕೋಚ್ ಹತ್ಯೆಯ ಆರೋಪದಿಂದ ಅವರನ್ನು 2018ರಲ್ಲಿ ಖುಲಾಸೆಗೊಳಿಸಲಾಗಿತ್ತು.

 ದೇಶದಲ್ಲಿ ಇರುವ ಅಥವಾ ದೇಶ ಬಿಟ್ಟು ತೆರಳಲು ಸಾದಿ ಗಡ್ಡಾಫಿ ಮುಕ್ತವಾಗಿದ್ದಾರೆ ಎಂದು ಲಿಬಿಯಾ ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News