ಪ್ರತಿರೋಧ ಪಡೆ ಮುಖಂಡ ಮಸೂದ್ ಹೇಳಿಕೆ ಪ್ರಸಾರ ನಿಷೇಧಿಸಿದ ತಾಲಿಬಾನ್

Update: 2021-09-07 17:50 GMT

ಕಾಬೂಲ್, ಸೆ.7: ಪಂಜ್ಶಿರ್ನ ರಾಷ್ಟ್ರೀಯ ಪ್ರತಿರೋಧ ಪಡೆ(ಎನ್ಆರ್ಎಫ್)ನ ಮುಖಂಡ ಅಹ್ಮದ್ ಮಸೂದ್ ಅವರ ಸಂದೇಶ, ಹೇಳಿಕೆಯನ್ನು ಪ್ರಸಾರ ಮಾಡದಂತೆ ಅಫ್ಘಾನ್ ಮಾಧ್ಯಮಗಳಿಗೆ ತಾಲಿಬಾನ್ ಸೂಚಿಸಿದೆ ಎಂದು ‘ಸ್ಪುಟ್ನಿಕ್’ ಸೋಮವಾರ ವರದಿ ಮಾಡಿದೆ.

ತಾಲಿಬಾನ್ ವಿರುದ್ಧ ರಾಷ್ಟ್ರಮಟ್ಟದಲ್ಲಿ ಪ್ರತಿರೋಧಕ್ಕೆ ಮಸೂದ್ ಕರೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಸೂದ್ ಹಾಗೂ ಎನ್ಆರ್ಎಫ್ ನೀಡುವ ಯಾವುದೇ ಹೇಳಿಕೆ, ಸಂದೇಶ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಾಲಿಬಾನ್ ಸೂಚಿಸಿದ.

ಜೊತೆಗೆ, ಅಫ್ಘಾನ್ ನ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ಮತ್ತು ರಾಷ್ಟ್ರೀಯ ಸಮನ್ವಯ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ಲಾ ಅಬ್ದುಲ್ಲಾ ಅಫ್ಘಾನ್ ನ ಪ್ರಜೆಗಳೊಂದಿಗೆ ಸಭೆ ನಡೆಸುವುದಕ್ಕೂ ತಾಲಿಬಾನ್ ತಡೆಹೇರಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News