ಬೋಧನಾ ಕೆಲಸಕ್ಕೆ ಮರಳಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪತ್ನಿ ಜಿಲ್ ಬೈಡೆನ್

Update: 2021-09-07 17:52 GMT

ವಾಷಿಂಗ್ಟನ್, ಸೆ.7: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪತ್ನಿ, ಆ ದೇಶದ ಪ್ರಥಮ ಮಹಿಳೆ ಜಿಲ್ ಬೈಡೆನ್ ಮಂಗಳವಾರ ನಾರ್ದರ್ನ್ ವರ್ಜಿನಿಯಾ ಕಮ್ಯುನಿಟಿ ಕಾಲೇಜಿನ ತಮ್ಮ ಬೋಧನಾ ವೃತ್ತಿಗೆ ಮರಳಿದ್ದಾರೆ. ಜಿಲ್ ಬೈಡೆನ್ 2009ರಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನ ಸೋಂಕಿನ ಕಾರಣದಿಂದ ಅಮೆರಿಕದಲ್ಲಿ ಇದುವರೆಗೆ ಆನ್ಲೈನ್ ಪಾಠ ಪ್ರವಚನಗಳಿದ್ದವು. ಈಗ ತರಗತಿಯಲ್ಲಿ ಪಾಠ ಆರಂಭವಾಗಿದ್ದು ಬೈಡೆನ್ ಕಾಲೇಜಿನಲ್ಲಿ ಬೋಧನಾ ಕಾರ್ಯ ಆರಂಭಿಸಿದ್ದಾರೆ. ಪೂರ್ಣಾವಧಿ ಉದ್ಯೋಗ ನಿರ್ವಹಿಸುವ ಅಮೆರಿಕದ ಮೊಟ್ಟಮೊದಲ ಪ್ರಥಮ ಮಹಿಳೆ ಎಂಬ ಹಿರಿಮೆ ಜಿಲ್ ಬೈಡೆನ್ ರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News