ಅಮೆರಿಕ: ಕರಾವಳಿ ಪ್ರಾಂತ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆ‌

Update: 2021-09-13 17:41 GMT

ಮಿಯಾಮಿ, ಸೆ.13: ನಿಕೊಲಾಸ್ ಚಂಡಮಾರುತ ಕ್ರಮೇಣ ದಕ್ಷಿಣ ಅಮೆರಿಕದ ಕರಾವಳಿ ತೀರದತ್ತ ಮುಂದುವರಿಯುತ್ತಿದ್ದು ಮುಂದಿನ ಹಲವು ದಿನ ಈ ಭಾಗದಲ್ಲಿ ಧಾರಾಕಾರ ಮಳೆ ಸುರಿಯಲಿದೆ ಎಂದು ಅಮೆರಿಕದ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸೆ.12ರ ರಾತ್ರಿ ಟೆಕ್ಸಾಸ್ ಕರಾವಳಿ ತೀರಕ್ಕೆ ಅಪ್ಪಳಿಸಿರುವ ಚಂಡಮಾರುತದಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಚಂಡಮಾರುತ ನಿಧಾನವಾಗಿ ಮೆಕ್ಸಿಕೋ, ಲೂಸಿಯಾನಾ ಕರಾವಳಿ ತೀರದತ್ತ ಮುಂದುವರಿಯುತ್ತಿದೆ ಎಂದು ಇಲಾಖೆ ಹೇಳಿದೆ. ಹ್ಯೂಸ್ಟನ್ ಮತ್ತು ಟೆಕ್ಸಾಸ್ ಕರಾವಳಿ ತೀರ ಪ್ರದೇಶದಲ್ಲಿ ರಕ್ಷಣಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News