ಇತರ ರಾಷ್ಟ್ರಗಳ ವಿರುದ್ಧ ದಾಳಿಗೆ ಅಫ್ಘಾನ್ ನೆಲ ಬಳಸಲು ಉಗ್ರರಿಗೆ ಅವಕಾಶ ನೀಡೆವು: ಅಫ್ಘಾನ್ ವಿದೇಶಾಂಗ ಸಚಿವ ಘೋಷಣೆ‌

Update: 2021-09-14 18:07 GMT

ಕಾಬೂಲ್, ಸೆ.14: ಉಗ್ರರು ಇತರರ ಮೇಲೆ ದಾಳಿ ನಡೆಸಲು ಅಫ್ಘಾನ್ನೆಲವನ್ನು ಬಳಸಿಕೊಳ್ಳುವುದಕೆ  ತಾಲಿಬಾನ್ ಆಡಳಿತ ಅವಕಾಶ ನೀಡುವುದಿಲ್ಲವೆಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ವೌಲವಿ ಅಮೀರ್ ಖಾನ್ ಮುತ್ತಾಕಿ ತಿಳಿಸಿದ್ದಾರೆ.

ತಾಲಿಬಾನ್ ಮಧ್ಯಂತರ ಸರಕಾರವನ್ನು ಸ್ಥಾಪಿಸಿದ ಒಂದು ವಾರದ ಬಳಿಕ ಪ್ರಪ್ರಥಮ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘‘ ನಮ್ಮ ನೆಲವನ್ನು ಇತರ ರಾಷ್ಟ್ರಗಳ ವಿರುದ್ಧ ಬಳಸುವುದಕ್ಕೆ ಯಾರಿಗೂ ಅಥವಾ ಯಾವ ಗುಂಪಿಗೂ ಅವಕಾಶ ನೀಡುವುದಿಲ್ಲ’’ ಎಂದರು.
ನೂತನ ತಾಲಿಬಾನ್ ಸರಕಾರದಲ್ಲಿ ಇತರ ಬಣಗಳು, ಅಲ್ಪಸಂಖ್ಯಾತರು ಅಥವಾ ಮಹಿಳೆಯರಿಗೆ ಅವಕಾಶ ನೀಡುವ ಬಗ್ಗೆ ಯಾವುದೇ ಕಾಲಮಿತಿಯನ್ನು ನಿರ್ಧರಿಸಲಾಗಿಲ್ಲವೆಂದು ತಿಳಿಸಿದರು.

ದೇಶದಲ್ಲಿ ಚುನಾವಣೆಯನ್ನು ನಡೆಸಲಾಗುವುದೆಂಬ ಪ್ರಶ್ನೆಗೂ ನೇರವಾಗಿ ಉತ್ತರಿಸದ ಅವರು ಇತರ ರಾಷ್ಟ್ರಗಳುಅಫ್ಘಾನಿಸ್ತಾನದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ನಡೆಸಬಾರದೆಂದು ಆಗ್ರಹಿಸಿದರು.

ಕಳೆದ ವರ್ಷ ಅಮೆರಿಕದ ಜೊತೆ ಏರ್ಪಡಿಸಿಕೊಂಡ ಒಪ್ಪಂದದ ಪ್ರಕಾರ ತಾಲಿಬಾನ್ ತಾನು ಅಲ್‌ ಖೈದಾ ಮತ್ತಿತರ ಉಗ್ರ ಗುಂಪುಗಳ ಜೊತೆ ನಂಟನ್ನು ಕಡಿದುಕೊಳ್ಳುವುದಾಗಿ ಭರವಸೆ ನೀಡಿತ್ತು ಮತ್ತು ಅವು ಅಫ್ಘಾನ್ ಪ್ರಾಂತದ ಮೂಲಕ ಇತರ ದೇಶಗಳಿಗೆ ಬೆದರಿಕೆಯೊಡ್ಡಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News