ವಿದ್ಯುತ್ ಅವ್ಯವಸ್ಥೆ, ಇಂಧನದ ಕೊರತೆ: ಲೆಬನಾನ್ ನಲ್ಲಿ ತೀವ್ರಗೊಂಡ ಬಿಕ್ಕಟ್ಟು

Update: 2021-09-20 17:40 GMT

ಬೆರೂತ್, ಸೆ.20: ತಿಂಗಳುಗಟ್ಟಲೆಯಿಂದ ನಿರಂತರ ವಿದ್ಯುತ್ ಸ್ಥಗಿತ, ತೀವ್ರ ಇಂಧನದ ಕೊರತೆ ಹಾಗೂ 2019ರಿಂದ ಬ್ಯಾಂಕಿಂಗ್ ಕ್ಷೇತ್ರ ದಿವಾಳಿಯಾಗಿರುವದರಿಂದ ಲೆಬನಾನ್ನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಅಗತ್ಯ ವಸ್ತುಗಳ ಖರೀದಿಗೆ ಬ್ಯಾಂಕ್ನಿಂದ ಹಣ ಹಿಂಪಡೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. 4 ಬ್ಯಾಂಕ್ ಕಚೇರಿಗೆ ಅಲೆದಾಡಿದರೂ, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕಚೇರಿಯ ಕಾರ್ಯನಿರ್ವಹಣೆಗೆ ತೊಡಕಾಗಿದೆ ಎಂದು ಅನುವಾದಕಿಯಾಗಿ ಕಾರ್ಯನಿರ್ವಹಿಸುತ್ತಿರುವ 32 ವರ್ಷದ ಜಿನೇನ್ ಹೇಳಿದ್ದಾರೆ.

 2019ರಲ್ಲಿ ಲೆಬನಾನ್ನ ಬ್ಯಾಂಕಿಂಗ್ ವ್ಯವಸ್ಥೆ ದಿವಾಳಿಯಾದಂದಿನಿಂದ ಹಲವರು ಅಂತರಾಷ್ಟ್ರೀಯ ಕರೆನ್ಸಿ ವರ್ಗಾವಣೆ ಸಂಸ್ಥೆಗಳ ನೆರವು ಪಡೆಯುತ್ತಿದ್ದಾರೆ. ಆದರೆ ವಿದ್ಯುತ್ ವ್ಯವಸ್ಥೆ ಹದಗೆಟ್ಟಿರುವುದರಿಂದ ಈ ಪ್ರಕ್ರಿಯೆಗೂ ಅಡ್ಡಿಯಾಗಿದೆ. 2 ವರ್ಷದ ಹಿಂದೆ ಅಮೆರಿಕದ ಡಾಲರ್ ಎದುರು ಲೆಬನಾನ್ನ ಪೌಂಡ್ 90%ಕ್ಕೂ ಅಧಿಕ ಅಪವೌಲ್ಯಗೊಂಡಿದೆ.

ಇದೇ ಸಂದರ್ಭ, ದೇಶದಲ್ಲಿ ತೈಲದ ಕೊರತೆಯೂ ತೀವ್ರವಾಗಿದೆ. ಪೆಟ್ರೋಲ್ ಬಂಕ್ ಎದುರು ವಾಹನಗಳ ಮೈಲುಗಟ್ಟಲೆ ಸರತಿ ಸಾಲು ಸಾಮಾನ್ಯ ದೃಶ್ಯವಾಗಿದೆ ಎಂದು ವರದಿ ಹೇಳಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News