ಟ್ಯುನೀಷಿಯಾ: ಪ್ರಪ್ರಥಮ ಮಹಿಳಾ ಪ್ರಧಾನಿ ನೇಮಕ

Update: 2021-09-29 17:59 GMT

ಟ್ಯೂನಿಸ್, ಸೆ.29: ವಿಶ್ವಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸಿದ್ದ ನಜ್ಲಾ ಬೌಡೆನ್ ರೋಮ್ಧೇನ್ರನ್ನು ಟ್ಯುನೀಷಿಯಾದ ಪ್ರಪ್ರಥಮ ಮಹಿಳಾ ಪ್ರಧಾನಮಂತ್ರಿ ಎಂದು ಅಧ್ಯಕ್ಷ ಕಯೀಸ್ ಸಯೀದ್ ಹೆಸರಿಸಿದ್ದಾರೆ.

ಕ್ಷಿಪ್ರಕ್ರಾಂತಿಯ ಬಳಿಕ ಟ್ಯುನೀಷಿಯಾದಲ್ಲಿ ಅಧಿಕಾರಕೇರಿದ್ದ ಸುಮಾರು 2 ತಿಂಗಳ ಬಳಿಕ ಅಧ್ಯಕ್ಷ ಸಯೀದ್ ನೂತನ ಪ್ರಧಾನಿಯನ್ನು ನೇಮಿಸಿರುವುದಾಗಿ ಘೋಷಿಸಿದ್ದಾರೆ. ಜುಲೈಯಲ್ಲಿ ಈ ಹಿಂದಿನ ಪ್ರಧಾನಿಯನ್ನು ವಜಾಗೊಳಿಸಿದ್ದ ಸಯೀದ್ ಸಂಸತ್ತನ್ನು ಅಮಾನತಿನಲ್ಲಿರಿಸಿದ್ದರು. ಜೊತೆಗೆ ತಮಗೆ ಕೈಗೆ ವ್ಯಾಪಕ ಅಧಿಕಾರವನ್ನು ಪಡೆದಿದ್ದರು. ಈ ಮಧ್ಯೆ, ನೂತನ ಸರಕಾರವನ್ನು ಸ್ಥಾಪಿಸುವಂತೆ ದೇಶದೊಳಗೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಒತ್ತಡ ಎದುರಿಸಿದ್ದರು.

ಕಳೆದ ವಾರ ಸಂವಿಧಾನದ ಹಲವು ಪರಿಚ್ಛೇದಗಳನ್ನು ಅಮಾನತಿನಲ್ಲಿಟ್ಟಿದ್ದರು.
ಟ್ಯುನೀಷಿಯಾಕ್ಕೆ ಪ್ರಪ್ರಥಮ ಮಹಿಳಾ ಪ್ರಧಾನಿಯನ್ನು ನೇಮಿಸಿರುವುದು ಟ್ಯುನೀಷಿಯಾಕ್ಕೆ ದೊರೆತ ಗೌರವ ಮತ್ತು ಮಹಿಳೆಯರಿಗೆ ನೀಡಿದ ಮರ್ಯಾದೆಯಾಗಿದೆ. ನೂತನ ಸರಕಾರವನ್ನು ತಕ್ಷಣ ರಚಿಸುವಂತೆ ಪ್ರಧಾನಿಗೆ ಸೂಚಿಸಲಾಗಿದೆ. ದೇಶದ ಹಲವು ಇಲಾಖೆಗಳಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ಮತ್ತು ಅವ್ಯವಸ್ಥೆಗೆ ಅಂತ್ಯ ಹಾಡುವುದು ನೂತನ ಸರಕಾರದ ಮೊದಲ ಗುರಿಯಾಗಿದೆ ಎಂದು ಅಧ್ಯಕ್ಷರ ಅಧಿಕೃತ ವೆಬ್ಸೈಟ್ನಲ್ಲಿ ಟ್ವೀಟ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News