ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಗಾನ್ ವಿಶ್ವಸಂಸ್ಥೆಗೆ ನೇಮಿಸಿದ ರಾಯಭಾರಿಗೆ ಮಾನ್ಯತೆ ನೀಡಲು ಆಗ್ರಹ

Update: 2021-10-03 17:48 GMT

ಕಾಬೂಲ್, ಸೆ.3: ಅಫ್ಗಾನಿಸ್ತಾನದ ಪ್ರತಿನಿಧಿಯನ್ನಾಗಿ ತನ್ನನ್ನು ಮಾನ್ಯ ಮಾಡಬೇಕೆಂದು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಗಾನಿಸ್ತಾನ (ಐಇಎ)ವು ವಿಶ್ವಸಂಸ್ಥೆಗೆ ರಾಯಭಾರಿಯನ್ನಾಗಿ ನೇಮಿಸಿರುವ ಸುಹೈಲ್ ಶಾಹೀನ್ ಮತ್ತೊಮ್ಮೆ ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ. ಈ ಹಿಂದಿನ ಅಫ್ಘಾನ್ ಸರಕಾರ ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಆ ಸರಕಾರ ನೇಮಿಸಿದ್ದ ರಾಯಭಾರಿ ಗುಲಾಂ ಮುಹಮ್ಮದ್ ಇಸಕ್ಝಾಯಿ ಅಫ್ಗಾನಿಸ್ತಾನದ ಪ್ರತಿನಿಧಿುಲ್ಲ ಎಂದು ಶಾಹೀನ್ ಪ್ರತಿಪಾದಿಸಿದ್ದಾರೆ.

 ಅಫ್ಗಾನ್ ನ ಪ್ರತಿನಿಧಿಯಾಗಿ ಶಾಹೀನ್ ನೇಮಕವನ್ನು ಕಳೆದ ತಿಂಗಳು ವಿಶ್ವಸಂಸ್ಥೆ ತಿರಸ್ಕರಿಸಿ, ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸರಕಾರ ನೇಮಿಸಿದ್ದ ಇಸಕ್ಝಾಯಿ ಕಾರ್ಯಾವಧಿಯನ್ನು ವಿಸ್ತರಿಸಿತ್ತು. ಆದರೆ ವಿಶ್ವಸಂಸ್ಥೆಯಲ್ಲಿ ಐಇಎಯ ಪ್ರತಿನಿಧಿ ತಾನು ಎಂದು ಶಾಹೀನ್ ಸ್ವಯಂ ಘೋಷಿಸಿಕೊಂಡಿದ್ದಾರೆ. ಐಇಎಗೆ ಯಾವ ದೇಶವೂ ಇದುವರೆಗೆ ಅಧಿಕೃತ ಮಾನ್ಯತೆ ನೀಡಿಲ್ಲ.

ಈ ಮಧ್ಯೆ, ವಿಶ್ವಸಂಸ್ಥೆಯಲ್ಲಿ ಅಫ್ಗಾನ್ನ ಪ್ರತಿನಿಧಿಯಾಗಿ ಇಸಾಕ್ಝಾಯಿಯನ್ನು ಮುಂದುವರಿಸಿರುವ ಕ್ರಮ ಸರಿಯಲ್ಲ. ಅಧ್ಯಕ್ಷರೇ ದೇಶದಿಂದ ಪಲಾಯನ ಮಾಡಿದ್ದು ಅಫ್ಗಾನಿಸ್ತಾನದಲ್ಲಿ ಪ್ರಜಾಧಿಪತ್ಯ ವ್ಯವಸ್ಥೆಯಿಲ್ಲ ಎಂದು ಅಫ್ಗಾನಿಸ್ತಾನದ ರಾಜಕೀಯ ವಿಶ್ಲೇಷಕ ಸಲೀಂ ಕಾಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News