ಫ್ರಾನ್ಸ್ ನಿಂದ ರಾಯಭಾರಿ ಕರೆಸಿಕೊಂಡ ಅಲ್ಜೀರಿಯಾ

Update: 2021-10-03 17:49 GMT

ಪ್ಯಾರಿಸ್, ಅ.3: ಅಲ್ಜೀರಿಯಾದ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಮಾಕ್ರನ್ ಮಾಡಿರುವ ಸ್ವೀಕಾರಾರ್ಹವಲ್ಲದ ಹೇಳಿಕೆಯನ್ನು ಖಂಡಿಸಿ ಆ ದೇಶದಲ್ಲಿನ ತನ್ನ ರಾಯಭಾರಿಯನ್ನು ಸಮಾಲೋಚನೆಗಾಗಿ ವಾಪಾಸು ಕರೆಸಿಕೊಂಡಿರುವುದಾಗಿ ಅಲ್ಜೀರಿಯಾ ಹೇಳಿದೆ. 

ಅಲ್ಜೀರಿಯಾ, ಮೊರೊಕ್ಕೊ ಮತ್ತು ಟ್ಯುನೀಷಿಯಾ ಪ್ರಜೆಗಳಿಗೆ ನೀಡಿರುವ ವೀಸಾಗಳ ಸಂಖ್ಯೆಯನ್ನು ಕಡಿತಗೊಳಿಸಲು ಫ್ರಾನ್ಸ್ ನಿರ್ಧರಿಸಿರುವುದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ಅಲ್ಜೀರಿಯಾ ಈ ಹಿಂದೆ ಫ್ರಾನ್ಸ್‌ನ ವಸಾಹತು ರಾಷ್ಟ್ರವಾಗಿತ್ತು. ಅಲ್ಜೀರಿಯಾ ದಲ್ಲಿ ನರಮೇಧಕ್ಕೆ ಹೊಣೆಯಾಗಿರುವ ಫ್ರಾನ್ಸ್, ಈಗ ಅಲ್ಜೀರಿಯಾದ ಬಗ್ಗೆ ಸ್ವೀಕಾರಾರ್ಹವಲ್ಲದ ಹೇಳಿಕೆ ನೀಡಿದೆ . ಫ್ರಾನ್ಸ್ನ ಅಧ್ಯಕ್ಷರು ನೀಡಿರುವ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹೇಳಿಕೆಯನ್ನು ಮತ್ತು ಅಲ್ಜೀ ರಿಯಾದ ಆಂತರಿಕ ವ್ಯವಹಾರಗಳಲ್ಲಿ ಸ್ವೀಕಾರಾರ್ಹವಲ್ಲದ ಹಸ್ತಕ್ಷೇಪವನ್ನು ಖಂಡಿಸುತ್ತೇವೆ. ಈ ಹೇಳಿಕೆ ಫ್ರಾನ್ಸ್‌ನ ವಸಾಹತುಶಾಹಿಯನ್ನು ವಿರೋಧಿಸಿ ಮೃತಪಟ್ಟ ಅಲ್ಜೀರಿಯನ್ನರಿಗೆ ಮಾಡಿರುವ ಅವಮಾನವಾಗಿದೆ ಎಂದು ಅಲ್ಜೀರಿ ಯಾದ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News