ಲಾಭಕ್ಕಾಗಿ ಕೆಡುಕು ಮರೆಮಾಚುತ್ತಿರುವ ಫೇಸ್ಬುಕ್: ಸಂಸ್ಥೆಯ ಮಾಜಿ ಅಧಿಕಾರಿ ಫ್ರಾನ್ಸೆಸ್ ಹ್ಯೂಗೆನ್ ಆರೋಪ

Update: 2021-10-06 18:03 GMT
photo: twitter.com/FrancesHaugen

ವಾಶಿಂಗ್ಟನ್, ಅ.6: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ಬುಕ್ ಸಂಸ್ಥೆಗೆ, ಇನ್ಸ್ಟಾಗ್ರಾಂ ಸೇರಿದಂತೆ ತನ್ನ ವಿವಿಧ ಆ್ಯಪ್ಗಳಿಂದ ಉಂಟಾಗಬಹುದಾದ ವಿವಿಧ ಸಮಸ್ಯೆಗಳ ಬಗ್ಗೆ ಸ್ಪಷ್ಟವಾದ ಅರಿವಿದ್ದರೂ ಅದನ್ನು ಮರೆಮಾಚುತ್ತಿದೆ ಎಂದು ಸಂಸ್ಥೆಯ ಮಾಜಿ ಅಧಿಕಾರಿಣಿ ಫ್ರಾನ್ಸೆಸ್ ಹ್ಯೂಗೆನ್ ಮಂಗಳವಾರ ಬಹಿರಂಗಪಡಿಸಿದ್ದಾರೆ. ಫೇಸ್ಬುಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಅಮೆರಿಕದ ಶಾಸನಸಭೆ ಕಾಂಗ್ರೆಸ್ಗೆ ಆಗ್ರಹಿಸಿದ್ದಾರೆ. ಇತ್ತೀಚೆಗೆ ಫ್ರಾನ್ಸಿಸ್ ಹ್ಯೂಗೆಸ್ ಅವರು ಫೇಸ್ಬುಕ್ ವಿರುದ್ಧ ಹೊರಿಸಿದ್ದ ಗಂಭೀರ ಆರೋಪಗಳ ಬಗ್ಗೆ ಅಮೆರಿಕ ಸೆನೆಟ್ ಬುಧವಾರ ಅವರಿಂದ ವಿವರಣೆಯನ್ನು ಪಡೆದುಕೊಂಡಿತು.

   
ಇನ್ಸ್ಟಾಗ್ರಾಂನಿಂದ ಹದಿಹರೆಯದ ಬಾಲಕಿಯರ ಮೇಲಾಗಬಹುದಾದ ಹಾನಿಕರ ಪರಿಣಾಮ ಸೇರಿದಂತೆ ತನ್ನ ವಿವಿಧ ಆ್ಯಪ್ಗಳು ಸಮಾಜದಲ್ಲಿ ವಿವಿಧ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು ಪೇಸ್ಬುಕ್ಗೆ ಕೂಲಂಕುಶವಾಗಿ ತಿಳಿದಿದೆಯೆಂದು ತೋರಿಸುವ ಸಾವಿರಾರು ಪುಟುಗಳ ಆಂತರಿಕ ಸಂಶೋಧನೆಗಳು ಹಾಗೂ ದಾಖಲೆಪತ್ರಗಳನ್ನು ಫ್ರಾನ್ಸೆಸ್ ಅವರು ಸೆನೆಟ್ಗೆ ಸಲ್ಲಿಸಿದ್ದಾರೆ.
   
37 ವರ್ಷದ ಫ್ರಾನ್ಸೆಸ್ ಅವರು ಫೇಸ್ಬುಕ್ನ ಮಾಜಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಪೌರ ಪ್ರಾಮಾಣಿಕತೆಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಕೆಲಸ ಮಾಡಿದ್ದರು. ಯುವ ಬಳಕೆದಾರರ ಮೇಲೆ ಫೇಸ್ಬುಕ್ ಒಡೆತನದ ಇನ್ಸ್ಟ್ರಾಗ್ರಾಂನ ಪರಿಣಾಮಗಳ ಬಗ್ಗೆಯೂ ಸೆನೆಟ್ನ ಉಪಸಮಿತಿ ಅವರನ್ನು ಪ್ರಶ್ನಿಸಿದೆ.
       
‘‘ನಾನು ಸೆನೆಟ್ ಮುಂದೆ ಹಾಜರಾಗಿರುವುದು ಯಾಕೆಂದರೆ ಫೇಸ್ಬುಕ್ನ ಉತ್ಪನ್ನಗಳು ಮಕ್ಕಳಿಗೆ ಹಾನಿಯುಂಟು ಮಾಡುತ್ತದೆ, ದ್ವೇಷಭಾಷಣವನ್ನು ಪ್ರೋತ್ಸಾಹಿಸುತ್ತದೆ ಹಾಗೂ ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಫ್ರಾನ್ಸೆಸ್ ಅವರು ಹೇಳಿದ್ದಾರೆ. ‘‘ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂಗಳನ್ನು ಹೆಚ್ಚು ಸುರಕ್ಷಿತವಾಗಿ ಮಾಡಬಹುದೆಂದು ಕಂಪೆನಿಗೆ ತಿಳಿದಿದೆ. ಆದರೂ ಅದಕ್ಕೆ ಅಗತ್ಯವಿರುವಂತಹ ಬದಲಾವಣೆಗಳನ್ನು ಮಾಡುವುದಿಲ್ಲ. ಆಕೆಂದರೆ ಇದರಿಂದಾಗಿ ಅವರು ಬ್ರಹ್ಮಾಂಡದಂತಹ ಲಾಭಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಸಂಸದೀಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ನಿಮ್ಮ ನೆರವು ಇಲ್ಲದೆ ಇದ್ದಲ್ಲಿ ಈ ಬಿಕ್ಕಟ್ಟು ಬಗೆಹರಿಯಲಾರದು ’’ ಎಂದು ಫ್ರಾನ್ಸೆಸ್ ಸೆನೆಟ್ಗೆ ಮನವಿ ಮಾಡಿದ್ದಾರೆ.

‘‘ತಂಬಾಕುಗಳಿಂದ ಉಂಟಾಗುವ ಅಪಾಯಕಾರಿ ಪರಿಣಾಮಗಳು ನಮ್ಮ ಅರಿವಿಗೆ ಬಂದ ಆನಂತರವಷ್ಟೇ ಸರಕಾರ ಕ್ರಮವನ್ನು ಕೈಗೊಂಡಿತು. ಸೀಟುಬೆಲ್ಟ್ಗಳನ್ನು ಧರಿಸಿ ಕಾರಿನಲ್ಲಿ ಪ್ರಯಾಣಿಸುವುದು ಸುರಕ್ಷಿತವೆಂದು ಹೇಳಿದ ಆನಂತರವಷ್ಟೇ ಸರಕಾರವು ಕ್ರಮ ಕೈಗೊಂಡಿತು. ಇಂದು ತಮ್ಮ ಉತ್ಪನ್ನಗಳಲ್ಲಿ ಮಾಕದ್ರವ್ಯದ ಅಂಶಗಳನನು ಪುರಾವೆಯನ್ನು ಬಚ್ಚಿಡುವ ಕಂಪೆನಿಗಳ ವಿರುದ್ಧ ಸರಕಾರವು ಕ್ರಮ ಕೈಗೊಂಡಿದೆ. ಅದೇ ಮಾದರಿಯನ್ನು ಫೇಸ್ಬುಕ್ ವಿಷಯದಲ್ಲಿಯೂ ಅನುಸರಿಸಿ’ ಎಂದವರು ಸೆನೆಟ್ಗೆ ಒತ್ತಾಯಿಸಿದರು.
 
ಫೇಸ್ಬುಕ್ ತನ್ನ ವೇದಿಕೆಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತದೆ ಮತ್ತು ಬಳಕೆದಾರರು ಅಂತಹ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗುವಂತೆ ಮಾಡುವ ವ್ಯವಸ್ಥೆಯನ್ನು ರೂಪಿಸಿದೆ ಎಂದರು.

ತನ್ನ ವೇದಿಕೆಯಲ್ಲಿ ಮಾದಕವಸ್ತು ಬಳಕೆಯನ್ನು ಉತ್ತೇಜಿಸುವ ಹಲವಾರು ಜಾಹೀರಾತುಗಳನ್ನು ಸದ್ಯ ಬಳಕೆಯಲ್ಲಿರುವ ಫೇಸ್ಬುಕ್ n ಕೃತಕ ಬುದ್ಧಿಮತ್ತೆ ಸಾಫ್ಟ್ವೇರ್ (ಆಲ್ಗೋರಿದಂ)ಗೆ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೆಂದು ಫ್ರಾನ್ಸೆಸ್ ಫೇಸ್ಬುಕ್ ವಿರುದ್ಧ ಅಮೆರಿಕ ಸೆನೆಟ್ನಲ್ಲಿ , ಮಾಜಿ ಉದ್ಯೋಗಿ ಫ್ರಾನ್ಸೆಸ್ ಹ್ಯೂಗೆನ್ ಮಾಡಿರುವ ಆರೋಪಗಳನ್ನು ಫೇಸ್ಬುಕ್ ವರಿಷ್ಠ ಝುಕೆರ್ಬರ್ಗ್ ತಳ್ಳಿಹಾಕಿದ್ದಾರೆ. 

ಫ್ರಾನೆಸ್ ಅವರ ಹೇಳಿಕೆಯು, ಕಂಪೆನಿಯ ವಿರುದ್ಧ ಸುಳ್ಳು ಚಿತ್ರಣವನ್ನು ಸೃಷ್ಟಿಸಿದೆ ಎಂದು ಅರು ಹೇಳಿದರು. ಫ್ರಾನ್ಸೆಸ್ ಹ್ಯೂಗೆನ್ ಅವರು ಅಮೆರಿಕ ಸೆನೆಟ್ನಲ್ಲಿ ವಿವರಣೆ ಬೆನ್ನಲ್ಲೇ ಫೇಸ್ಬುಕ್ ಹ್ಯೂಜೆನ್ ವಿರುದ್ಧ ಪ್ರತಿ ಹೇಳಿಕೆಯೊಂದನ್ನು ಪ್ರಕಟಿಸಿದೆ. ‘‘ ಇಂದು ಸೆನೆಟ್ನ ವಾಣಿಜ್ಯ ಉಪಸಮಿತಿಯ ಮುಂದೆ ವಿಚಾರಣೆಗೆ ಹಾಜರಾದ ಫೇಸ್ಬುಕ್ನ ಮಾಜಿ ಉಪ ಉತ್ಪನ್ನ ಅಧಿಕಾರಿಯು, ಸಂಸ್ಥೆಯಲ್ಲಿ ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಗೆ ಕೆಲಸ ಮಾಡಿದವರಾಗಿದ್ದಾರೆ. ಸಂಸ್ಥೆಯ ಕಾರ್ಯನಿರ್ವಾಹಕ ನೀತಿ ನಿರೂಪಕ ಸಭೆಗಳಲ್ಲಿ ಯಾವತ್ತಾ ಭಾಗವಹಿಸಲಿಲ್ಲ ಹಾಗೂ ತನಗೆ ವಹಿಸಲಾದ ಕರ್ತವ್ಯಗಳನ್ನು ನಿರ್ವಹಿಸದೆ ಇದ್ದುದಕ್ಕಾಗಿ ಆರಕ್ಕೂ ಅಧಿಕ ಸಲ ಪ್ರಶ್ನಿಸಲ್ಪಟ್ಟಿದ್ದರು ಎಂದು ಫೇಸ್ಬುಕ್ ವಕ್ತಾರ ಆ್ಯಂಡಿ ಸ್ಟೋನ್ ತಿಳಿಸಿದ್ದಾರೆ.
  
ಹಲವಾರು ವಿಷಯಗಳಿಗೆ ಸಂಬಂಧಿಸಿ ಸೆನೆಟ್ನಲ್ಲಿ ಆಕೆ ನೀಡಿದ ವಿವರಣೆಯನ್ನು ನಾವು ಒಪ್ಪುವುದಿಲ್ಲ. ಇದೆಲ್ಲದರ ಹೊರತಾಗಿಯೂ ಇಂಟರ್ನೆಟ್ಗೆ ಪ್ರಮಾಣಿತವಾದ ಮಾನದಂಡವೊಂದನ್ನು ರೂಪಿಸುವುದನ್ನು ಆರಂಭಿಸಲು ಇದು ಸಕಾಲವೆಂದು ತಾವು ನಂಬುದಾಗಿ ಸ್ಟೋನ್ ತಿಳಿಸಿದ್ದಾರೆ.

1. ಫೇಸ್ಬುಕ್ ನೀತಿ ರೂಪಿಸಲು ಸರಕಾರಗಳೇ ನಿಯಂತ್ರಣ ಮಂಡಳಿಯನ್ನು ರಚಿಸಹೇಕು.
  2. ಬಳಕೆದಾರರು ಪೋಸ್ಟ್ ಮಾಡುವ ವಿಷಯಗಳಿಗೆ ಹೊಣೆಗಾರರಾಗದಂತೆ ಸಾಮಾಜಿಕ ಜಾಲತಾಣಗಳನ್ನು ರಕ್ಷಿಸುವ ನಿಯಮಗಳಿಗೆ ತಿದ್ದುಪಡಿ ತರಬೇಕು.
3. ಫೇಸ್ಬುಕ್ ದ್ವೇಷಭಾಷಣ ಹಾಗೂ ತಪ್ಪು ಮಾಹಿತಿ ಹರಡುವಿಕೆಯನ್ನು ನಿಗ್ರಹಿಸುವುದಕ್ಕಿಂತ ಹೆಚ್ಚಾಗಿ ಲಾಭಕ್ಕೆ ಆದ್ಯತೆ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News