ಫೆಲೇಸ್ತಿನ್ ವಿಷಯಗಳಿಗೆ ಫೇಸ್ ಬುಕ್ ಸೆನ್ಸಾರ್: ಅಮೆರಿಕದ ಮಾನವಹಕ್ಕು ಕಣ್ಗಾವಲು ಸಂಸ್ಥೆ ಆರೋಪ

Update: 2021-10-08 17:44 GMT

ಜೆರುಸಲೇಂ,ಅ.9: ಈ ವರ್ಷ ನಡೆದ ಇಸ್ರೇಲ್-ಫೆಲೆಸ್ತೀನ್ ಹಿಂಸಾಚಾರದ ಸಂದರ್ಭ ನಡೆದಿರುವ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಫೆಲೆಸ್ತೀನಿಯರಿಗೆ ಸಂಬಂಧಿಸಿದ ವಿಷಯಗಳನ್ನು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ತೆಗೆದುಹಾಕುತ್ತಿವೆಯೆಂದು ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆಯೊಂದು ಶುಕ್ರವಾರ ಆಪಾದಿಸಿದೆ.


ಫೇಸ್ಬುಕ್ ಮೇಲೆ ಸರಕಾರದ ನಿಯಂತ್ರಣದ ಅಗತ್ಯವಿದೆಯೆಂದು ಮಂಗಳವಾರ ಫೇಸ್ಬುಕ್ ನ ಮಾಜಿ ಅಧಿಕಾರಿಣಿ ಫ್ರಾನ್ಸೆಸ್ ಹ್ಯೂಗೆನ್ ಅವರು ಅಮೆರಿಕದ ಶಾಸನಸಭಾ ಸದಸ್ಯರನ್ನು ಆಗ್ರಹಿಸಿದ ಬೆನ್ನಲ್ಲೇ ಜಗತ್ತಿನ ಈ ಜನಪ್ರಿಯ ಜಾಲತಾಣದ ವಿರುದ್ಧ ಮಾನವಹಕ್ಕುಗಳ ಸಂಸ್ಥೆ ಆರೋಪ ಮಾಡಿರುವುದು ಗಮನಾರ್ಹವಾಗಿದೆ.


ಈ ವರ್ಷದ ಮೇ ತಿಂಗಳಲ್ಲಿ ಜೆರುಸಲೇಂನಲ್ಲಿ ಇಸ್ರೇಲ್ ಸೇನೆ ಹಾಗೂ ಫೆಲೆಸ್ತೀನ್ ಹೋರಾಟಗಾರರ ನಡುವೆ ನಡೆದ ಘರ್ಷಣೆಯು ಮಿಲಿಟರಿ ಸಂಘರ್ಷಕ್ಕೆ ತಿರುಗಿದ ಬಳಿಕ ಸಾಮಾಜಿಕ ಜಾಲತಾಣಗಳು ಫೆಲೆಸ್ತೀನಿಯರಿಗೆ ಸಂಬಂಧಿಸಿದ ವಿಷಯಗಳಿಗೆ ಸೆನ್ಸಾರ್ ವಿಧಿಸಿವೆಯೆಂಬ ಆರೋಪಗಳು ಕೇಳಿಬಂದಿದ್ದವು.
ಇಸ್ರೇಲ್ ಹಾಗೂ ಫೆಲೆಸ್ತೀನ್ನಲ್ಲಿ ಮಾನವಹಕ್ಕುಗಳ ವಿಷಯಗಳ ಕುರಿತಾಗಿ ಫೆಲೆಸ್ತೀನಿಯರು ಹಾಗೂ ಅವರ ಬೆಂಬಲಿಗರು ಪೋಸ್ಟ್ ಮಾಡಿರುವ ವಿಷಯಗಳನ್ನು ಫೇಸ್ ಬುಕ್ ಹತ್ತಿಕ್ಕುತ್ತಿದೆ ಎಂದು ಮಾನವಹಕ್ಕುಗಳ ಕಣ್ಗಾವಲಿಗಾಗಿನ ಹಿರಿಯ ಡಿಜಿಟಲ್ ಹಕ್ಕುಗಳ ಸಂಶೋಧಕಿ ಡೆಬೊರಾ ಬ್ರೌನ್ ಅವರು ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.ಪೇಸ್ಬುಕ್ನ ಈ ಸೆನ್ಸಾರ್ಶಿಪ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.


ಇಸ್ರೇಲ್-ಫೆಲೆಸ್ತೀನ್ಗೆ ಸಂಬಂಧಿಸಿದ ಪೋಸ್ಟ್ ಮಾಡಲಾದ ಕಂಟೆಂಟ್ಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆಯಂಬ ಆರೋಪಗಳ ಬಗ್ಗೆ ಫೇಸ್ಬುಕ್ ವಿರುದ್ಧ ಸ್ವತಂತ್ರ ತನಿಖೆ ನಡೆಯಬೇಕೆಂದು ಡೆಬೊರಾ ಆಗ್ರಹಿಸಿದ್ದಾರೆ.


 ‘ತಮ್ಮ ಫೇಸ್ಬುಕ್ ಖಾತೆಗಳ ಮೂಲಕ ಫೆಲೆಸ್ತೀನ್-ಇಸ್ರೇಲ್ ಹಿಂಸಾಚಾರದ ಉಲ್ಬಣಿಸುತ್ತಿರುವ ಕುರಿತ ಪೋಸ್ಟ್ ಮಾಡಿದ ಕಂಟೆಂಟ್ಗಳ ಸ್ಕ್ರೀನ್ ಶಾಟ್ ಗಳನ್ನು ಮಾನವಹಕ್ಕುಗಳ ಕಣ್ಗಾವಲು ಸಮಿತಿಯು ಪರಿಸೀಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News