×
Ad

ಬೈರೂತ್ ಸ್ಫೋಟ ಪ್ರಕರಣ: ಲೆಬನಾನ್ ಮಾಜಿ ಸಚಿವರ ಬಂಧನಕ್ಕೆ ವಾರಂಟ್ ಜಾರಿ

Update: 2021-10-12 23:52 IST

ಬೈರೂತ್, ಅ.12: ಲೆಬನಾನ್‌ನ ಬೈರೂತ್ ಬಂದರ್‌ನಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೀಕರ ಸ್ಫೋಟದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ಲೆಬನಾನ್‌ನ ಮಾಜಿ ವಿತ್ತಸಚಿವರ ಬಂಧನಕ್ಕೆ ನ್ಯಾಯಾಧೀಶರು ವಾರಂಟ್ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ. ಸ್ಫೋಟದಲ್ಲಿ ಹಲವಾರು ಮಂದಿ ಮೃತಪಟ್ಟಿದ್ದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ, ಮಾಜಿ ವಿತ್ತ ಸಚಿವ , ಲೆಬನಾನ್‌ನ ಅಮಲ್ ಮೂಮೆಂಟ್ ಪಕ್ಷದ ಪ್ರಮುಖ ಮುಖಂಡ ಅಲಿ ಹಸನ್ ಖಲೀಲ್‌ರ ಬಂಧನಕ್ಕೆ ಮಂಗಳವಾರ ಅರೆಸ್ಟ್ ವಾರಂಟ್ ಜಾರಿಗೊಳಿಸಿದ್ದಾರೆ ಎಂು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News