ಭೂಗಡಿ ಕಾನೂನು ಅಂಗೀಕರಿಸಿದ ಚೀನಾ‌

Update: 2021-10-24 18:36 GMT

ಬೀಜಿಂಗ್,ಅ.24: ‘ಚೀನಾದ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಏಕತೆಯು ‘ಪವಿತ್ರವಾದುದು ಹಾಗೂ ಉಲ್ಲಂಘಿಸಲಾಗದ್ದು’ ಎಂದು ಪ್ರತಿಪಾದಿಸಿರುವ ಚೀನಿ ರಾಷ್ಟ್ರೀಯ ಶಾಸಕಾಂಗ ಸಬೆಯು ತನ್ನ ನೆಲದ ಗಡಿಪ್ರದೇಶಗಳ ರಕ್ಷಣೆ ಹಾಗೂ ಬಳಕೆಯ ಕುರಿತ ನೂತನ ಕಾನೂನನ್ನು ಶನಿವಾರ ಅಂಗೀಕರಿಸಿದೆ. ಚೀನಾದ ಈ ನೀತಿಯು ಭಾರತದ ಜೊತೆಗಿನ ಗಡಿವಿವಾದದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.

ಶನಿವಾರ ಶಾಸಕಾಂಗ ಸಭೆಯ ಸಮಾರೋಪ ಸಭೆಯಲ್ಲಿ ರಾಷ್ಟ್ರೀಯ ಜನತಾ ಕಾಂಗ್ರೆಸ್ (ಎನ್ಪಿಸಿ)ನ ಸ್ಥಾಯಿ ಸಮಿತಿಯ ಸದಸ್ಯರು ಈ ಕಾನೂನಿಗೆ ಅನುಮೋದನೆ ನೀಡಿದರೆಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ತೆ ಕ್ಸಿನುವಾ ವರದಿ ಮಾಡಿದೆ.ನೂತನ ಕಾನೂನು ಮುಂದಿನ ವರ್ಷದ ಜನವರಿ 1ರಿಂ ಜಾರಿಗೆ ಬರಲಿದೆ ಎಂದು ವರದಿ ತಿಳಿಸಿದೆ.

ತನ್ನ ಪ್ರಾಂತೀಯ ಏಕತೆಯನ್ನು ಹಾಗೂ ಭೂ ಗಡಿಗಳನ್ನು ಸಂರಕ್ಷಿಸಲು ಹಾಗೂ ತನ್ನ ಪ್ರಾಂತೀಯ ಸಾರ್ವಭೌಮತೆಯನ್ನು ಮತ್ತು ಭೂಗಡಿಗಳನ್ನು ಕಡೆಗಣಿಸುವಂತಹ ಯಾವುದೇ ಕೃತ್ಯದ ವಿರುದ್ಧ ಕಾವಲು ಕಾಯಲು ಹಾಗೂ ಸಂಘರ್ಷ ನಡೆಸಲು ಚೀನಾ ಸರಕಾರವು ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಕಾನೂನು ಪ್ರತಿಪಾದಿಸುತ್ತದೆ ಎಂದು ವರದಿ ಹೇಳಿದೆ.

ಗಡಿರಕ್ಷಣೆಯನ್ನು ಬಲಪಡಿಸಲು, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಬೆಂಬಲಿಸಲು ಮತ್ತು ಗಡಿಪ್ರದೇಶಗಳನ್ನು ತೆರೆದಿಡಲು, ಅಂತಹ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳು ಹಾಗೂ ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಾನೂನು ಪ್ರತಿಪಾದಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News