ಇರಾನ್ ಗೆ 6.3 ಮಿಲಿಯನ್ ಡಾಲರ್ ಮೊತ್ತದ ವೈದ್ಯಕೀಯ ನೆರವು: ಜಪಾನ್ ಘೋಷಣೆ

Update: 2021-10-28 17:46 GMT

ಟೋಕಿಯೊ, ಅ.28: ಇರಾನ್‌ನ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಆ ದೇಶಕ್ಕೆ 6.3 ಮಿಲಿಯನ್ ಡಾಲರ್ ಮೊತ್ತದ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ಜಪಾನ್‌ನ ವಿದೇಶ ವ್ಯವಹಾರ ಇಲಾಖೆ ಘೋಷಿಸಿದೆ.

ಈ ಕುರಿತ ಒಪ್ಪಂದ ಪತ್ರವನ್ನು ಇರಾನ್‌ನಲ್ಲಿ ಜಪಾನ್‌ನ ಚಾರ್ಜ್ ಡಿ ಅಫೇರ್ಸ್(ಸಹಾಯಕ ರಾಯಭಾರಿ) ಹಿರೊಟಕ ಮತ್ಸುವೊ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಹುಸೇನ್ ಸಯದ್ ಜಾಫರ್‌ಗೆ ಹಸ್ತಾಂತರಿಸಿದ್ದಾರೆ. ಅಂತರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಹಕಾರದ ಈ ನೆರವಿನಲ್ಲಿ ಇರಾನ್‌ನ 5 ನಗರಗಳಲ್ಲಿ 6 ಎಂಆರ್‌ಐ ಆಸ್ಪತ್ರೆಗಳ ನಿರ್ಮಾಣ, ಕೊರೋನ ಸೋಂಕಿನ ರೋಗ ನಿರ್ಣಯಕ್ಕೆ ಅಗತ್ಯವಿರುವ ವೈದ್ಯಕಿೀಯ ಸಾಧನಗಳ ಪೂರೈಕೆ ಸೇರಿದೆ.

ಕೊರೋನ ಸೋಂಕನ್ನು ಇರಾನ್ ಸರಿಯಾಗಿ ನಿರ್ವಹಿಸದ ಕಾರಣ ಜಾಗತಿಕ ಮಟ್ಟದಲ್ಲಿ ಕೊರೋನ ಸೋಂಕಿನ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’(ಎಚ್‌ಆರ್‌ಡಬ್ಲ್ಯೂ) ಸಂಸ್ಥೆ ವರದಿ ಮಾಡಿದ ಹಿನ್ನೆಲೆಯಲ್ಲಿ ಜಪಾನ್ ಈ ನೆರವು ಒದಗಿಸಲು ಮುಂದಾಗಿದೆ. ತನ್ನ ದೇಶದಲ್ಲಿರುವ ಕೊರೋನ ಸೋಂಕಿನ ಪರಿಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡುವಂತೆ ಇರಾನ್ ಸರಕಾವನ್ನು ಎಚ್‌ಆರ್‌ಡಬ್ಲ್ಯೂ ಆಗ್ರಹಿಸಿದೆ.

ಇರಾನ್‌ನಲ್ಲಿ ಕೊರೋನ ಸೋಂಕಿನ 5ನೇ ಅಲೆ ಆಗಸ್ಟ್‌ನಲ್ಲಿ ಆರಂಭವಾಗಿದ್ದು ಕನಿಷ್ಟ 655 ದೈನಂದಿನ ಸೋಂಕು ಪ್ರಕರಣ ದಾಖಲಾಗುತ್ತಿದೆ ಎಂದು ಇರಾನ್ ಸರಕಾರದ ಅಂಕಿಅಂಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News