ಜರ್ಮನಿ: ಕೊರೋನ ಸೋಂಕು ಪ್ರಕರಣ ಏರಿಕೆ

Update: 2021-11-01 18:16 GMT
ಸಾಂದರ್ಭಿಕ ಚಿತ್ರ

ಬರ್ಲಿನ್, ನ.1: ಮೇ ತಿಂಗಳ ಬಳಿಕ ಮೊದಲ ಬಾರಿಗೆ ಜರ್ಮನಿಯಲ್ಲಿ ಸೋಮವಾರ ದೈನಂದಿನ ಕೊರೋನ ಸೋಂಕು ಪ್ರಕರಣ 150ಕ್ಕೂ ಅಧಿಕಗೊಂಡಿದ್ದು , ದೇಶದಲ್ಲಿ 4ನೇ ಅಲೆ ಕಾಣಿಸಿಕೊಳ್ಳುವ ಆತಂಕ ಮೂಡಿದೆ.

ಕಳೆದ 7 ದಿಗಳಲ್ಲಿ , ಪ್ರತೀ 1 ಲಕ್ಷ ಮಂದಿಯಲ್ಲಿ 154.8 ಮಂದಿಗೆ ಹೊಸದಾಗಿ ಸೋಂಕು ಬಾಧಿಸಿದ್ದು ಇದುವರೆಗೆ ಈ ಪ್ರಮಾಣ 110.1 ಆಗಿತ್ತು. ಕೊರೋನ ಸೋಂಕು ಉಲ್ಬಣಗೊಳ್ಳುವ ಲಕ್ಷಣ ಕಂಡು ಬಂದಿರುವುದು ತೀವ್ರ ಆತಂಕಕಾರಿ ಎಂದು ಜರ್ಮನಿಯ ನಿರ್ಗಮಿತ ಛಾನ್ಸಲರ್ ಆ್ಯಂಜೆಲಾ ಮರ್ಕೆಲ್ ರವಿವಾರ ಹೇಳಿದ್ದು, ಇದನ್ನು ನಿಯಂತ್ರಿಸಲು ತಕ್ಷಣ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ನೂತನ ಸರಕಾರ ಅಧಿಕಾರ ವಹಿಸುವ ವರೆಗೆ ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ.

ಕೊರೋನ ವಿರುದ್ಧದ ಬೂಸ್ಟರ್ ಲಸಿಕೆಯ ಡೋಸ್ ಪಡೆಯುವ ಅಗತ್ಯವನ್ನು ಪುನರುಚ್ಚರಿಸಿರುವ ಅವರು, ಲಸಿಕೆ ಎಲ್ಲೆಡೆ ಲಭ್ಯವಿದ್ದು ಜನತೆ ಲಸಿಕೆ ಪಡೆಯಲು ಆಸಕ್ತಿ ತೋರಬೇಕು ಎಂದಿದ್ದಾರೆ. ಜರ್ಮನ್ ಜನಸಂಖ್ಯೆಯ ಕೇವಲ 66.7% ಮಂದಿ ಮಾತ್ರ ಸಂಪೂರ್ಣ ಲಸಿಕೆ ಪಡೆದಿದ್ದು ಸುಮಾರು ಮೂರನೇ ಎರಡರಷ್ಟು ಜನತೆ ಒಂದೂ ಲಸಿಕೆ ಪಡೆದಿಲ್ಲ. ಹೊಸ ಸೋಂಕಿನ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದವರಲ್ಲಿ ಬಹುತೇಕ ರೋಗಿಗಳು ಲಸಿಕೆ ಪಡೆಯದವರು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News