ಕ್ಸಿ ಜಿನ್ಪಿಂಗ್ ಅಧಿಕಾರಾವಧಿ ಮೂರನೆ ಬಾರಿ ವಿಸ್ತರಣೆ ?: ನ.8ರಿಂದ ಆರಂಭವಾಗುವ ಸಿಪಿಸಿ ಸಮಾವೇಶದಲ್ಲಿ ನಿರ್ಣಯ ಸಾಧ್ಯತೆ

Update: 2021-11-06 17:36 GMT

ಬೀಜಿಂಗ್,ನ.7: ಮುಂದಿನ ವಾರ ಬೀಜಿಂಗ್‌ನಲ್ಲಿ ನಡೆಯಲಿರುವ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಮಹತ್ವದ ಸಮಾವೇಶದಲ್ಲಿ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಅವರ ಅಧಿಕಾರಾವಧಿಯನ್ನು ಸತತ ಮೂರನೆ ಬಾರಿ ವಿಸ್ತರಿಸಲು ಸುಗಮ ಹಾದಿಯನ್ನು ಕಲ್ಪಿಸುವ ಸಾಧ್ಯತೆಯಿದೆ.

68 ವರ್ಷದ ಕ್ಸಿ ಜಿನ್‌ಪಿಂಗ್ ಪ್ರಸಕ್ತ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ)ದ ಪ್ರಧಾನ ಕಾರ್ಯದರ್ಶಿ, ಮಿಲಿಟರಿ ಕೇಂದ್ರೀಯ ಆಯೋಗದ ಚೇರ್‌ಮನ್ (ಸಿಎಂಸಿ) ಮತ್ತು ದೇಶದ ಮತ್ತು ಸೇನೆಯ ಅಧ್ಯಕ್ಷ ಹೀಗೆ ಚೀನಾದ ಮೂರು ಅಧಿಕಾರ ಶಕ್ತಿ ಕೇಂದ್ರಗಳನ್ನು ನಿಯಂತ್ರಿಸುತ್ತಿದ್ದಾರೆ.

ಸಿಪಿಸಿಯ 100 ವರ್ಷಗಳ ಐತಿಹಾಸಿಕ ಅನುಭವ ಹಾಗೂ ಪ್ರಮುಖ ಸಾಧನೆಗಳ ಕುರಿ ನಿರ್ಣಯವನ್ನು ಒಳಗೊಂಡ ‘ಕ್ಸಿಜಿನ್‌ಪಿಂಗ್, ಸಿಪಿಸಿಯನ್ನು ನೂತನ ಪಯಣದೆಡೆಗೆ ಮುನ್ನಡೆಸುವ ವ್ಯಕ್ತಿ’ ಎಂಬ ಶೀರ್ಷಿಕೆಯ ದಾಖಲೆ ಗ್ರಂಥವನ್ನು ಈ ಮಹತ್ವದ ಸಭೆಯಲ್ಲಿ ಮಂಡಿಸಲಾಗುವು  ಮಹಾಸಭೆಯು ನವೆಂಬರ್ 8ರಿಂದ 11ರವರೆಗೆ ನಡೆಯಲಿದೆ. ತನ್ನ ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಪಕ್ಷದ ಸಂಸ್ಥಾಪಕ ಮಾವೋ ತ್ಸೆ ತುಂಗ್ ಬಳಿಕ ಚೀನಾ ಕಂಡ ಅತ್ಯಂತ ಪ್ರಭಾವಶಾಲಿ ಹಾಗೂ ಬಲಿಷ್ಠ ನಾಯಕರಾಗಿ ಗುರುತಿಸಲ್ಪಟ್ಟಿರುವ ಕ್ಸಿಜಿನ್‌ಪಿಂಗ್ ಅವರಿಗೆ ರಾಜಕೀಯ ದೃಷ್ಟಿಯಿಂದಲೂ ಇದೊಂದು ಮಹತ್ವದ ಸಭೆಯಾಗಿದೆ.

ಈ ಮೊದಲು ಎರಡು ವರ್ಷಗಳ ಅಧಿಕಾರಾವಧಿ ಹಾಗೂ 68 ವಯಸ್ಸನ್ನು ಪೂರ್ಣಗೊಳಿಸಿದವರು ಕಡ್ಡಾಯವಾಗಿದ್ದರಿಂದ ಕ್ಸಿಜಿನ್ ಪಿಂಗ್ ಅವರ ಹಿಂದಿನ ಎಲ್ಲಾ ಪೂರ್ವಾಧಿಕಾರಿಗಳು ಅನಿವಾರ್ಯವಾಗಿ ಅಧಿಕಾರದಿಂದ ನಿವೃತ್ತಿಗೊಂಡಿದ್ದರು.

ಕ್ಸಿಜಿನ್ ಪಿಂಗ್ ಅವರು 2018ರಲ್ಲಿ ಸಂವಿಧಾನ ತಿದ್ದುಪಡಿಗೊಳಿಸಿ ಅಧ್ಯಕ್ಷರ ಎರಡು ವರ್ಷಗಳ ಅಧಿಕಾರಾವಧಿಯ ಮಿತಿಯನ್ನು ರದ್ದುಪಡಿಸಿದ್ದರು. ಮಾವೋ ತ್ಸೆ ತುಂಗ್ ಅವರು2016ರಲ್ಲಿ ಅವರನ್ನು ಪಕ್ಷದ ಪ್ರಧಾನ ನಾಯಕನಾಗಿ ನೇಮಿಸಲಾಗಿತ್ತು.

 ಸಿಪಿಸಿಯ ಕೇಂದ್ರ ಸಮಿತಿಯ 370ಕ್ಕೂ ಅಧಿಕ ಪೂರ್ಣ ಹಾಗೂ ಪರ್ಯಾಯ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News