×
Ad

ಅಂತರ್‌ರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಬಿಮಲ್ ಪಟೇಲ್ ಆಯ್ಕೆ

Update: 2021-11-13 23:38 IST
PHOTO COURTESY: TWITTER

ವಿಶ್ವಸಂಸ್ಥೆ, ನ.13: ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ರಾಷ್ಟ್ರೀಯ ಭದ್ರತೆ ಸಲಹಾ ಮಂಡಳಿಯ ಸದಸ್ಯರಾಗಿರುವ ಪ್ರೊಫೆಸರ್ ಬಿಮಲ್ ಪಟೇಲ್ ಅಂತರ್‌ರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವಿಶ್ವಸಂಸ್ಥೆಯ ಸಹಸಂಸ್ಥೆಯಾಗಿರುವ ಕಾನೂನು ಆಯೋಗದ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಹಾಜರಿದ್ದ 192 ಸದಸ್ಯ ರಾಷ್ಟ್ರಗಳಲ್ಲಿ 163 ದೇಶಗಳು ಪಟೇಲ್‌ರನ್ನು ಬೆಂಬಲಿಸಿ ಮತ ಚಲಾಯಿಸಿವೆ.

 2023ರ ಜನವರಿಯಿಂದ ಮುಂದಿನ 5 ವರ್ಷ ಆಯೋಗದ ಸದಸ್ಯರಾಗಿ ಪಟೇಲ್ ಮುಂದುವರಿಯಲಿದ್ದಾರೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತ್ರಿಮೂರ್ತಿ ಪಟೇಲ್‌ರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಯುನೈಟೆಡ್ ನೇಷನ್ಸ್ ಆಫ್ ಯೂತ್, ಹೇಗ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ರಾಸಾಯನಿಕ ಅಸ್ತ್ರ ನಿಷೇಧ ಸಂಘಟನೆ(ಒಪಿಸಿಡಬ್ಲ್ಯೂ) ಮುಂತಾದ ಅಂತರ್‌ರಾಷ್ಟ್ರೀಯ ಸಂಘಟನೆಗಳಲ್ಲಿ 15 ವರ್ಷ ಕಾರ್ಯನಿರ್ವಹಿಸಿದ ಅನುಭವವನ್ನು ಪಟೇಲ್ ಹೊಂದಿದ್ದಾರೆ.

ಏಶ್ಯಾ ಪೆಸಿಫಿಕ್ ಗುಂಪಿನಲ್ಲಿರುವ 8 ಸ್ಥಾನಗಳಿಗೆ 11 ಮಂದಿ ಕಣದಲ್ಲಿದ್ದರು. ಭಾರತ 163, ಥೈಲ್ಯಾಂಡ್ 162, ಜಪಾನ್ 154, ವಿಯೆಟ್ನಾಮ್ 145, ಚೀನಾ 142, ದಕ್ಷಿಣ ಕೊರಿಯಾ 140, ಸಿಪ್ರಸ್ 139 ಮತ್ತು ಮಂಗೋಲಿಯಾ 123 ಮತ ಪಡೆದು ಗೆಲುವು ಸಾಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News