ಪತ್ರಕರ್ತೆ ಝಾಂಗ್ ಝಾನ್ ಬಂಧನವನ್ನು ಟೀಕಿಸಿದ ವಿಶ್ವಸಂಸ್ಥೆಯ ವಿರುದ್ಧ ಕಿಡಿಕಾರಿದ ಚೀನಾ

Update: 2021-11-20 17:34 GMT
photo:twitter

ಜಿನೇವಾ,ನ.20: ದೇಶದಲ್ಲಿ ಕೋವಿಡ್19 ಸಾಂಕ್ರಾಮಿಕದ ಹಾವಳಿಯ ಬಗ್ಗೆ ಸಮಗ್ರ ವರದಿ ಮಾಡಿದ್ದಕ್ಕಾಗಿ ಬಂಧಿತಳಾಗಿರುವ ಪೌರ ಪತ್ರಕರ್ತೆಯೊಬರ ಬಿಡುಗಡೆಗೆ ಆಗ್ರಹಿಸಿದ್ದಕ್ಕಾಗಿ ವಿಶ್ವಸಂಸ್ಥೆಯ ವಿರುದ್ಧ ಚೀನಾ ಶನಿವಾರ ಕಿಡಿಕಾರಿದೆೆ.

ಪತ್ರಕರ್ತೆ ಝಾಂಗ್ ಝಾನ್ ಅವರನ್ನು ಚೀನಾ ಸರಕಾರ ಬಂಧಿಸಿರುವುದನ್ನು ಖಂಡಿಸಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಾರ್ಯಾಲಯ (ಓಎಚ್‌ಸಿಎಚ್‌ಆರ್) ನೀಡಿರುವ ಹೇಳಿಕೆಯು ಬೇಜವಾಬ್ದಾರಿಯುತವಾದದು ಹಾಗೂ ಪ್ರಮಾದಯುತವಾಗಿದೆ ಎಂದು ಜಿನೇವಾದಲ್ಲಿನ ಚೀನಿ ರಾಯಭಾರಿ ಕಚೇರಿಯು ಆಕ್ರೋಶ ವ್ಯಕ್ತಪಡಿಸಿದೆ.

ಬಂಧಿತ ಚೀನಿಪತ್ರಕರ್ತೆ 38 ವರ್ಷ ವಯಸ್ಸಿನ ಝಾಂಗ್ ಝಾನ್ ಅವರ ಆರೋಗ್ಯವು ಹದಗೆಡುತ್ತಿದೆ ಹಾಗೂ ಆಕೆ ಉಪವಾಸ ಸತ್ಯಾಗ್ರಹ ಕೂಡಾ ನಡೆಸುತ್ತಿದ್ದು, ಆಕೆಯ ಪ್ರಾಣಕ್ಕೂ ಅಪಾಯವಿದೆಯೆಂದು ಶುಕ್ರವಾರ ಓಎಚ್‌ಸಿಎಚ್‌ಆರ್ ನ  ವಕ್ತಾರೆ ಮಾರ್ತಾ ಹುರ್ತಾಡೊ ಆತಂಕ ವ್ಯಕ್ತಪಡಿಸಿದ್ದರು.

ಮಾನವೀಯ ನೆಲೆಯಲ್ಲಿ ಝಾಂಗ್ ಅವರನ್ನು ತಕ್ಷಣವೇ ನಿಶರ್ತವಾಗಿ ಬಿಡುಗಡೆಗೊಳಿಸಬೇಕು ಹಾಗೂ ಆಕೆಯ ಘನತೆ ಮತ್ತು ಆಶಯವನ್ನು ಗೌರವಿಸುವ ಜೊತೆಗೆ , ಜೀವರಕ್ಷಕ ವೈದ್ಯಕೀಯ ಶುಶ್ರೂಷೆ ಲಭ್ಯವಾಗುವಂತೆ ನೋಡಿಕೊಳ್ಳೇಕು ಎಂದು ಹುರ್ಟಾಡೊ ಶುಕ್ರವಾರ ಚೀನಾವನ್ನು ಆಗ್ರಹಿಸಿದ್ದರು.

ಮಾಜಿ ನ್ಯಾಯವಾದಿಯಾದ ಝಾಂಗ್ ಝಾನ್ ಅವರು 2020ರ ಫೆಬ್ರವರಿಯಲ್ಲಿ ವುಹಾನ್ಗೆ ಕೋವಿಡ್19ನ ಉಗಮಸ್ಥಳ ವುಹಾನ್ ಪ್ರಯಾಣಿಸಿದ್ದರು. ನಗರದಲ್ಲಿ ಸೋಂಕನ್ನು ತಡೆಗಟ್ಟುವಲ್ಲಿ ಚೀನಿ ಅಧಿಕಾರಿಗಳ ವೈಫಲ್ಯವನ್ನು ಅವರು ತನ್ನ ಸ್ಮಾಟ್ಫೋನ್ ವಿಡಿಯೋಗ ಮೂಲಕ ಪ್ರಶ್ನಿಸಿದ್ದರು. 2020ರ ಮೇನಲ್ಲಿ ಅವರನ್ನು ಜಗಳಕ್ಕಿಳಿದ ಹಾಗೂ ಅಶಾಂತಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿತ್ತು ಸಾಮಾನ್ಯವಾಗಿ ಸರಕಾರದ ವಿರುದ್ಧ ಧ್ವನಿಯೆತ್ತುವವರನ್ನು ಚೀನಾದಲ್ಲಿ ಇಂತಹ ಹುಸಿ ಆರೋಪಗಳನ್ನು ಹೊರಿಸಿ ಬಂಧನದಲ್ಲಿಡುವುದು ಸಾಮಾನ್ಯವಾಗಿದೆ.

ತನ್ನ ಬಂಧನ ಖಂಡಿಸಿ ಝಾಂಗ್ ಝಾನ್ ಅವರು ಹಲವಾರು ಸಲ ಜೈಲಿನಲ್ಲಿ ನಿರಶನ ಕೈಗೊಂಡಿದ್ದರು. ಝಾಂಗ್ ಆಕೆ ತೀವ್ರವಾಗಿ ದೇಹತೂಕ ಕಳೆದುಕೊಂಡಿದ್ದು ಹೆಚ್ಚು ಸಮಯ ಬದುಕಲಾರರು ಎಂದು ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News