ಅಫ್ಘಾನಿಸ್ತಾನ: ಜಲಾಲಾಬಾದ್ ನಿಲ್ದಾಣಕ್ಕೆ ನಾಗರಿಕ ವಿಮಾನ ಆಗಮನ

Update: 2021-11-22 17:46 GMT

ಕಾಬೂಲ್, ನ.22: ಪೂರ್ವ ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತದ ಜಲಾಲಾಬಾದ್ ವಿಮಾನ ನಿಲ್ದಾಣಕ್ಕೆ 20 ವರ್ಷದಲ್ಲಿ ಪ್ರಥಮ ನಾಗರಿಕ ವಿಮಾನವು ಆಗಮಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ‌

ಮಾನವೀಯ ನೆರವಿನ ಪರಿಕರಗಳನ್ನು ಹೊಂದಿದ ವಿಮಾನ ಇರಾನ್‌ನಿಂದ  ಹೊರಟು ಜಲಾಲಾಬಾದ್ ನಿಲ್ದಾಣದಲ್ಲಿ ಇಳಿದಿದೆ ಎಂದು ರಶ್ಯಾದ ಸುದ್ಧಿಸಂಸ್ಥೆ ‘ಸ್ಪುಟ್ನಿಕ್’ ವರದಿ ಮಾಡಿದೆ. ಜಲಾಲಾಬಾದ್ ವಿಮಾನ ನಿಲ್ದಾಣದ ತಾಂತ್ರಿಕ ವ್ಯವಸ್ಥೆ ಸುಸ್ಥಿತಿಗೆ ಬಂದಿದ್ದು ಎಲ್ಲಾ ಸಿಬಂದಿಗಳನ್ನೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ನಾವು ಸಂಪೂರ್ಣ ಸಜ್ಜಾಗಿದ್ದೇವೆ ಎಂದು ವಿಮಾನ ನಿಲ್ದಾಣದ ಹಂಗಾಮಿ ನಿರ್ದೇಶಕ ಸ್ಪಿನ್ಘರ್ ಶಹಝಾದ್ ಶನಿವಾರ ಹೇಳಿಕೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News