ವೀಸಾ ಹೊಂದಿದ ವಿದೇಶೀಯರಿಗೆ ಆಸ್ಟ್ರೇಲಿಯಾ ಪ್ರವೇಶಿಸಲು ಡಿ.1ರಿಂದ ಅವಕಾಶ

Update: 2021-11-22 17:54 GMT
ಸಾಂದರ್ಭಿಕ ಚಿತ್ರ

ಸಿಡ್ನಿ, ನ.22: ವೀಸಾ ಹೊಂದಿರುವ ವಿದೇಶೀಯರು ದೇಶವನ್ನು ಪ್ರವೇಶಿಸಲು ಡಿಸೆಂಬರ್ 1ರಿಂದ ಅವಕಾಶ ನೀಡಲಾಗುವುದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಕೊರೋನ ಸೋಂಕು ನಿಯಂತ್ರಿಸುವ ಉದ್ದೇಶದಿಂದ, 2020ರ ಮೇ ತಿಂಗಳಿಂದ ಅಂತರಾಷ್ಟ್ರೀಯ ಗಡಿಯನ್ನು ಮುಚ್ಚಿದ್ದ ಆಸ್ಟ್ರೇಲಿಯಾ, ಸೀಮಿತ ಸಂಖ್ಯೆಯಲ್ಲಿ ಪ್ರಜೆಗಳು ಹಾಗೂ ಕಾಯಂ ನಿವಾಸಿಗಳು ದೇಶ ಪ್ರವೇಶಿಸಲು ಅವಕಾಶ ನೀಡಿತ್ತು. ‌

ಇತ್ತೀಚಿನ ದಿನಗಳಲ್ಲಿ ಈ ನಿಯಮದಲ್ಲಿ ಸ್ವಲ್ಪ ರಿಯಾಯಿತಿ ನೀಡಿ ಪ್ರಜೆಗಳ ವಿದೇಶಿ ಕುಟುಂಬ ಸದಸ್ಯರಿಗೆ ಪ್ರವೇಶಾವಕಾಶ ನೀಡಲಾಗಿತ್ತು. ಡಿಸೆಂಬರ್ 1ರಿಂದ ಲಸಿಕೆ ಪಡೆದ ವಿದ್ಯಾರ್ಥಿಗಳು, ಉದ್ದಿಮೆ ವೀಸಾ ಹೊಂದಿದವರು ಹಾಗೂ ನಿರಾಶ್ರಿತರಿಗೆ ಪ್ರವೇಶಾವಕಾಶಕ್ಕೆ ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ. 

ನಿಪುಣ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಆಸ್ಟ್ರೇಲಿಯಾಕ್ಕೆ ಮರಳುವುದು ನಮ್ಮ ಮರುಪಯಣದಲ್ಲಿ ಒಂದು ಪ್ರಮುಖ ಮೈಲುಗಲ್ಲು ಆಗಲಿದೆ. ಆಸ್ಟ್ರೇಲಿಯಾದ ಅರ್ಥವ್ಯವಸ್ಥೆಗೆ ವಿದೇಶಿ ವಿದ್ಯಾರ್ಥಿಗಳಿಂದ ವಾರ್ಷಿಕ 25 ಬಿಲಿಯನ್ ಡಾಲರ್ ಮೊತ್ತ ಸೇರ್ಪಡೆಗೊಳ್ಳುತ್ತಿದೆ. ಅಕ್ಟೋಬರ್ ಅಂತ್ಯದ ವರೆಗೆ, 1,60,000 ವಿದ್ಯಾರ್ಥಿಗಳ ಸಹಿತ 2,35,000ಕ್ಕೂ ಅಧಿಕ ವಿದೇಶೀಯರು ಆಸ್ಟ್ರೇಲಿಯಾದ ವೀಸಾ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News