ಕೋವಿಡ್ ವಿರುದ್ಧ ನಿಗಾ ಹೆಚ್ಚಿಸಲು ಭಾರತಕ್ಕೆ ಡಬ್ಲ್ಯುಎಚ್‌ಓ ಕರೆ

Update: 2021-11-28 17:55 GMT

ನ್ಯೂಯಾರ್ಕ್, ನ.28: ಕೊರೋನ ವೈರಸ್‌ನ ರೂಪಾಂತರಿ ಪ್ರಭೇದ ಒಮಿಕಾರ್ನ್ ಹರಡುವ ಭೀತಿ ಹಾಗೂ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೋವಿಡ್ 19 ಸಾಂಕ್ರಾಮಿಕದ ವಿರುದ್ಧ ಕಣ್ಗಾವಲನ್ನು ಹೆಚ್ಚಿಸುವಂತೆ, ಸಾರ್ವಜನಿಕ ಆರೋಗ್ಯ ನಿಯಮಾವಳಿಗಳು ಹಾಗೂ ಸಾಮಾಜಿಕ ನಿರ್ಬಂಧಗಳನ್ನು ಬಲಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಸೇರಿದಂತೆ ಆಗ್ನೇಯ ಏಶ್ಯದ ದೇಶಗಳಿಗೆ ಕರೆ ನೀಡಿದೆ.

ಉತ್ಸವಗಳು ಹಾಗೂ ಸಮಾರಂಭಗಳ ಆಚರಣೆಯ ಸಂದರ್ಭದಲ್ಲಿ ಸೋಂಕು ಹರಡದಂತೆ ತಡೆಯಲು ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಬೃಹತ್ ಸಭೆಗಳನ್ನು ನಡೆಸುವುದನ್ನು ತಪ್ಪಿಸಬೇಕೆಂದು ಅದು ಸಲಹೆ ನೀಡಿದೆ.

ಯಾವುದೇ ಬೆಲೆ ತೆತ್ತಾದರೂ ಸೋಂಕಿನ ವಿರುದ್ಧ ನಮ್ಮ ಕಣ್ಗಾವಲನ್ನು ನಾವು ಕಡಿಮೆಗೊಳಿಸಬಾರದು’’ ಎಂದು ವಿಶ್ವ ಆರೋಗ್ಯಸಂಸ್ಥೆಯ ಆಗ್ನೇಯ ಏಶ್ಯ ಪ್ರಾಂತದ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News