ಬಾಂಗ್ಲಾ: ವಿದ್ಯಾರ್ಥಿಗಳ ಪ್ರತಿಭಟನೆ

Update: 2021-11-29 17:51 GMT
ಸಾಂದರ್ಭಿಕ ಚಿತ್ರ:PTI

ಢಾಕಾ, ನ.29: ಬಾಂಗ್ಲಾದೇಶದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಅನುಷ್ಟಾನಕ್ಕೆ ಆಗ್ರಹಿಸಿ ಸಾವಿರಾರು ವಿದ್ಯಾರ್ಥಿಗಳು ರವಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.

ವಿಶ್ವದಲ್ಲಿ ಅತ್ಯಧಿಕ ರಸ್ತೆ ಅಪಘಾತವಾಗುವ, ಮತ್ತು ಅಪಘಾತದಿಂದ ಪ್ರಾಣಹಾನಿಯಾಗುವ ದೇಶಗಳಲ್ಲಿ ಬಾಂಗ್ಲಾ ಕೂಡಾ ಸೇರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2020ರ ಜನವರಿಯಿಂದ 2021ರ ಜೂನ್‌ವರೆಗೆ ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತದಿಂದ 3,558 ಮಂದಿ ಮೃತಪಟ್ಟಿರುವುದಾಗಿ ಬಾಂಗ್ಲಾ ವಿವಿಯ ಅಂಕಿಅಂಶ ತಿಳಿಸಿದೆ.

2018ರಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ಸಿನಡಿ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಬಳಿಕ ಸರಕಾರ ನೂತನ ರಸ್ತೆ ಸಂಚಾರ ನಿಯಮ ರೂಪಿಸಿತ್ತು. ಇದರಂತೆ, ನಿರ್ಲಕ್ಷ್ಯದ ಚಾಲನೆಯಿಂದ ಪ್ರಾಣಹಾನಿ ಸಂಭವಿಸಿದರೆ 5 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಆದರೆ ಈ ಕಾನೂನನ್ನು ಇನ್ನೂ ಜಾರಿಗೊಳಿಸದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News