ಆಸಿಯಾನ್ ದೇಶಗಳಲ್ಲಿ ವಿರೋಧ ಪಕ್ಷದ ಸಂಸದರ ವಿರುದ್ಧದ ಸೇಡಿನ ಕ್ರಮ ವಿಪರೀತ ಹೆಚ್ಚಳ

Update: 2021-12-02 17:28 GMT
photo:twitter/@ASEAN

ಯಾಂಗಾನ್, ಡಿ.2: ಆಗ್ನೇಯ ಏಶ್ಯಾ ದೇಶ(ಆಸಿಯಾನ್)ಗಳಲ್ಲಿ ವಿರೋಧ ಪಕ್ಷದ ಸಂಸದರ ವಿರುದ್ಧದ ಪ್ರತೀಕಾರ ಕೃತ್ಯಗಳ ಪ್ರಮಾಣ ಇತ್ತೀಚೆಗೆ ವಿಪರೀತ ಹೆಚ್ಚಿದೆ ಎಂದು ಮಾನವ ಹಕ್ಕುಗಳಿಗಾಗಿನ ಆಸಿಯಾನ್ ಸಂಸದರ ಸಂಘಟನೆ(ಎಪಿಎಚ್‌ಆರ್) ಗುರುವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಉಲ್ಲೇಖಿಸಿದೆ.

ಮ್ಯಾನ್ಮಾರ್‌ನಲ್ಲಿ ಸೇನಾಕ್ರಾಂತಿಯ ಬಳಿಕ ನಡೆಯುತ್ತಿರುವ ರಾಜಕೀಯ ದಮನ ಪ್ರಕ್ರಿಯೆಗಳು ಆಗ್ನೇಯ ಏಶ್ಯಾದಾದ್ಯಂತ ವಿಪಕ್ಷಗಳ ಸಂಸದರ ಬಂಧನ ಪ್ರಕರಣದಲ್ಲಿ ನಾಟಕೀಯ ಹೆಚ್ಚಳವಾಗಿರುವ ಬಗ್ಗೆ ಗಮನ ಸೆಳೆದಿವೆ. ಈ ವಲಯದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಮುಗಿಸಿಬಿಡುವ ವ್ಯಾಪಕ ಪ್ರವೃತ್ತಿಗೆ ಮ್ಯಾನ್ಮಾರ್‌ನಲ್ಲಿ ನಡೆದ ಸೇನಾಕ್ರಾಂತಿ ಉತ್ತಮ ಉದಾಹರಣೆಯಾಗಿದೆ ಎಂದು ವರದಿ ಹೇಳಿದೆ.

ಸೇನಾ ಕ್ರಾಂತಿಯ ದಿನದಂದೇ ಸರಕಾರದ ಸಲಹೆಗಾರರಾದ ಆಂಗ್ ಸ್ಯಾನ್ ಸೂಕಿ, ಅಧ್ಯಕ್ಷ ವಿನ್ ಮಿಂಟ್, ವಿಪಕ್ಷಗಳ ಮುಖಂಡರು ಹಾಗೂ 18 ಸಂಸದರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News