ಚೀನಾದ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆಗೆ ಅಮೆರಿಕ ಖಂಡನೆ

Update: 2021-12-02 17:37 GMT
ಸಾಂದರ್ಭಿಕ ಚಿತ್ರ:PTI

ಸಿಯೋಲ್, ಡಿ.2: ಚೀನಾವು ಹೈಪರ್‌ಸಾನಿಕ್ ಆಯುಧಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ವಲಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು , ಚೀನಾದಿಂದ ಎದುರಾಗಬಹುದಾದ ಸಂಭಾವ್ಯ ಬೆದರಿಕೆಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಅಮೆರಿಕ ಮುಂದುವರಿಸಲಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡಿ ಆಸ್ಟಿನ್ ಹೇಳಿದ್ದಾರೆ.

'ಚೀನಾ ಮತ್ತು ಉತ್ತರ ಕೊರಿಯಾದಿಂದ ಎದುರಾಗಿರುವ ಸವಾಲು ಹಾಗೂ ಇತರ ಭದ್ರತಾ ವಿಷಯಗಳಿಗೆ ಸಂಬಂಧಿಸಿ ದಕ್ಷಿಣ ಕೊರಿಯಾದೊಂದಿಗೆ ಗುರುವಾರ ಸಭೆ ನಡೆಸಿದ ಸಂದರ್ಭ ಮಾತನಾಡಿದ ಆಸ್ಟಿನ್' ಚೀನಾ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ನಡೆಸುತ್ತಿರುವ ಪ್ರಕ್ರಿಯೆಯ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಈ ಕಾರಣಕ್ಕೇ ಅಮೆರಿಕದ ರಕ್ಷಣಾ ಸಾಮರ್ಥ್ಯಕ್ಕೆ ಸವಾಲೆಸೆಯುವ ನಿಟ್ಟಿನತ್ತ ಚೀನಾ ಮುಂದುವರಿಯುತ್ತಿದೆ ಎಂದು ನಾವು ಪರಿಗಣಿಸಿದ್ದೇವೆ. ನಮಗೆ ಹಾಗೂ ನಮ್ಮ ಮಿತ್ರರಿಗೆ ಚೀನಾದಿಂದ ಎದುರಾಗಬಹುದಾದ ಸಂಭಾವ್ಯ ಬೆದರಿಕೆಯನ್ನು ನಿವಾರಿಸಿಕೊಂಡು ನಮ್ಮನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಾವು ಉಳಿಸಿಕೊಳ್ಳಲಿದ್ದೇವೆ ಎಂದರು. ಚೀನಾವು ಜುಲೈ ಮತ್ತು ಆಗಸ್ಟ್‌ನಲ್ಲಿ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News