ಚಕ್ರ ಸಿಡಿದ ನಂತರ ವಿಮಾನವನ್ನು ರನ್ ವೇಯಿಂದ ತಳ್ಳಿದ ಪ್ರಯಾಣಿಕರು; ವೀಡಿಯೊ ವೈರಲ್

Update: 2021-12-03 18:16 GMT
Photo: Twitter/@PLA_samrat

ಕಾಠ್ಮಂಡು: ರಸ್ತೆಗಳಲ್ಲಿ  ವಾಹನಗಳು ಕೆಟ್ಟುನಿಂತಾಗ ಅವುಗಳನ್ನು ಪ್ರಯಾಣಿಕರು ತಳ್ಳುವುದು ಸಾಮಾನ್ಯ ವಿಚಾರ. ವಿಮಾನಗಳನ್ನು ಹಾಗೆ ಮಾಡಲಾಗುತ್ತದೆ ಎಂದು  ಹೇಳಲಾಗುವುದಿಲ್ಲ. ಆದರೆ,  ನೇಪಾಳದ ವಿಮಾನ ನಿಲ್ದಾಣದಲ್ಲಿ ಜನರ ಗುಂಪೊಂದು ಚಕ್ರ ಸಿಡಿದು ರನ್ ವೇಯಲ್ಲಿ ನಿಂತಿದ್ದ ವಿಮಾನವನ್ನು  ತಳ್ಳಿದ್ದಾರೆ.  ನಂಬಲಾಗದ ಕ್ಷಣದ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ಟಿಕ್ಟಾಕ್ ನಲ್ಲಿ ಮೊದಲು ವೈರಲ್ ಆಗಿರುವ ವೀಡಿಯೊದಲ್ಲಿ ಪ್ರಯಾಣಿಕರು ತಮ್ಮ ಎಲ್ಲಾ ಶಕ್ತಿ ಬಳಸಿ ರನ್ವೇಯಲ್ಲಿ ಸಣ್ಣ ವಿಮಾನವನ್ನು ತಳ್ಳುತ್ತಿರುವುದು ಕಂಡುಬಂದಿದೆ. ವಿಮಾನದ ಒಂದು ಟೈರ್ ಸಿಡಿದ ನಂತರ  ರನ್ ವೇಯಲ್ಲಿ ಚಲಿಸಲು ಸಹಾಯ ಮಾಡಲು ಹಲವಾರು ಜನರು ವಿಮಾನದ ಎರಡೂ ಬದಿಗಳಲ್ಲಿ ನಿಂತಿರುವುದು ಕಂಡುಬಂದಿದೆ. ಈ ಘಟನೆಯನ್ನು ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾಯಿತು, ಅಲ್ಲಿ ಪ್ರಯಾಣಿಕರು ಹಗುರವಾದ ತಾರಾ ಏರ್ ವಿಮಾನವನ್ನು ತಳ್ಳಿದ್ದಾರೆ.

ಈ ಕ್ಲಿಪ್ ಟ್ವಿಟರ್ ನಲ್ಲಿಯೂ ವೈರಲ್ ಆಗಿದೆ, ಇದು "ಬಹುಶಃ ನೇಪಾಳದಲ್ಲಿ ಮಾತ್ರ" ಎಂದು ನೇಪಾಳದ ಓರ್ವ ಟ್ವಿಟರ್ ಬಳಕೆದಾರ ತಮಾಷೆ ಮಾಡಿದ್ದಾರೆ.

ನೇಪಾಳಿ ಪತ್ರಕರ್ತ ಸುಶೀಲ್ ಭಟ್ಟರಾಯ್ ಅವರ ಪ್ರಕಾರ, ನೋಂದಣಿ ಸಂಖ್ಯೆ 9NAEV ಹೊಂದಿರುವ ತಾರಾ ಏರ್ಗೆ ಸೇರಿದ ಟ್ವಿನ್ ಓಟರ್ ವಿಮಾನವು ರನ್ವೇ ಮಧ್ಯದಲ್ಲಿ ಸಿಲುಕಿಕೊಂಡಿತ್ತು. ವಿಮಾನವು ರನ್ವೇಗೆ ಅಡ್ಡಿಯಾಗುತ್ತಿದ್ದಂತೆ, ಪ್ರಯಾಣಿಕರು ಹಾಗೂ  ಭದ್ರತಾ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ವಿಮಾನವನ್ನು ಸರಿಸಲು ಒಟ್ಟಾಗಿ ಸೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News