ಟ್ರಂಪ್ ರ ಸಾಮಾಜಿಕ ಮಾಧ್ಯಮ ಸಂಸ್ಥೆಗೆ ಅಮೆರಿಕದ ಸಂಸದ ಸಿಇಒ

Update: 2021-12-07 18:23 GMT
ಡೊನಾಲ್ಡ್ ಟ್ರಂಪ್ (ಫೋಟೊ : PTI) 

ವಾಷಿಂಗ್ಟನ್, ಡಿ.7: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಲಕತ್ವದ 'ಫ್ಲೆಜ್ಲಿಂಗ್ ಸಾಮಾಜಿಕ ಮಾಧ್ಯಮ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಅಮೆರಿಕದ ಸಂಸದ ಡೆವಿನ್ ನನ್ಸ್ ರನ್ನು ನೇಮಕ ಮಾಡಲಾಗಿದೆ.

ಟ್ರಂಪ್ ಅವರ ಅತ್ಯಂತ ನಂಬಿಕಸ್ತ ಬೆಂಬಲಿಗ ಡೆವಿನ್ ನನ್ಸ್ 2022ರ ಜನವರಿಯಲ್ಲಿ ನೂತನ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಟ್ರಂಪ್ ಮೀಡಿಯಾ ಆ್ಯಂಡ್ ಟೆಕ್ನಾಲಜಿ ಗ್ರೂಫ್(ಟಿಎಂಟಿಜಿ) ಸೋಮವಾರ ಘೋಷಿಸಿದೆ. ನನ್ಸ್ ಸಂಸತ್ ಸದಸ್ಯ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಅಮೆರಿಕವನ್ನು ಮಹಾನ್ ಆಗಿಸಿದ ಸ್ವಾತಂತ್ರ್ಯವನ್ನು ಹಾಳುಗೆಡುವ ಬೃಹತ್ ಟೆಕ್ನಾಲಜಿ ಸಂಸ್ಥೆಗಳು ಹಾಗೂ ಮುಕ್ತ ಮಾಧ್ಯಮವನ್ನು ನಾವು ತಡೆಯಬೇಕಾಗಿದೆ ಎಂಬುದನ್ನು ಡೆವಿನ್ ಅರಿತುಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕವು ಇಂಟರ್‌ನೆಟ್ ಕನಸನ್ನು ವಾಸ್ತವಗೊಳಿಸಿತ್ತು. 

ಇದೀಗ ಅಮೆರಿಕಾದ ಸಂಸ್ಥೆಯೊಂದು ಈ ಕನಸನ್ನು ಮರುಸ್ಥಾಪಿಸಲಿದೆ. ಇಂಟರ್‌ನೆಟ್ ಅನ್ನು ಮರಳಿ ತೆರೆಯುವ ಮತ್ತು ಚಿಂತನೆ, ಭಾವನೆಗಳನ್ನು ಸೆನ್ಸಾರ್ ಮಾಡದೆ ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡುವ ಸಮಯ ಇದೀಗ ಬಂದಿದೆ ಎಂದು ಡೆವಿನ್ ನನ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News