×
Ad

ಪಾಕಿಸ್ತಾನ: ಪೊಲೀಸ್ ಅಧಿಕಾರಿಯ ಗುಂಡಿಕ್ಕಿ ಹತ್ಯೆ

Update: 2021-12-11 23:42 IST
ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್, ಡಿ.11: ಪೋಲಿಯೊ  ಲಸಿಕೆ ಕಾರ್ಯಕ್ರಮದ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿಯನ್ನು ಪಾಕಿಸ್ತಾನಿ ತಾಲಿಬಾನ್ ಸಂಘಟನೆಯ ಸದಸ್ಯರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಪಾಕ್ ಸರಕಾರ- ಪಾಕಿಸ್ತಾನಿ ತಾಲಿಬಾನ್ ಸಂಘಟನೆಯ ನಡುವಿನ ಒಂದು ತಿಂಗಳ ಕದನವಿರಾಮ ಅಂತ್ಯಗೊಂಡ ಬಳಿಕ ನಡೆದ ಪ್ರಥಮ ದಾಳಿ ಪ್ರಕರಣ ಇದಾಗಿದೆ.

ಗುಂಡೇಟಿನಿಂದ ಮತ್ತೊಬ್ಬ ಪೊಲೀಸ್‌ಗೆ ಗಾಯವಾಗಿದೆ. ನಿಷೇಧಿತ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಅಥವಾ ಪಾಕಿಸ್ತಾನಿ ತಾಲಿಬಾನ್ ಎಂದು ಕರೆಸಿಕೊಳ್ಳುವ ಸಂಘಟನೆ ಈ ದಾಳಿಯ ಹೊಣೆ ವಹಿಸಿಕೊಂಡಿದೆ. ಖೈಬರ್ ಫಖ್ತುಂಖ್ವಾ ಪ್ರಾಂತದ ತಾಂಕ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ಈ ಪ್ರಾಂತದ ಸುಮಾರು 6.5 ಮಿಲಿಯನ್ ವಿದ್ಯಾರ್ಥಿಗಳಿಗೆ ಪೋಲಿಯೊ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ. ಈ ಕಾರ್ಯಕ್ರಮದ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದೆ. ಲಸಿಕೆ ಹಾಕುತ್ತಿದ್ದ ತಂಡದ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News