×
Ad

ರಮಲ್ಲಾ: ಮತಚಲಾಯಿಸಿದ ಪೆಲೆಸ್ತೀನೀಯರು‌

Update: 2021-12-11 23:46 IST
ಸಾಂದರ್ಭಿಕ ಚಿತ್ರ:PTI

ರಮಲ್ಲಾ, ಡಿ.11: ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯಲ್ಲಿ ನಡೆಯುತ್ತಿರುವ ನಗರಪಾಲಿಕೆ ಚುನಾವಣೆಯ ಪ್ರಥಮ ಹಂತದಲ್ಲಿ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಪೆಲೆಸ್ತೀನೀಯರು ಶನಿವಾರ ಮತ ಚಲಾಯಿಸಿದ್ದಾರೆ.

ಪಶ್ಚಿಮ ದಂಡೆಯ 154 ಗ್ರಾಮ ಹಾಗೂ ಸ್ಥಳೀಯ ಸಮಿತಿಗಳಲ್ಲಿ ಶನಿವಾರ ಮತದಾನ ನಡೆದಿದ್ದು ಒಬ್ಬ ಅಭ್ಯರ್ಥಿ ಸ್ಪರ್ಧಿಸುತ್ತಿರುವ ಅಥವಾ ಅಭ್ಯರ್ಥಿಗಳೇ ಇಲ್ಲದ 220ಕ್ಕೂ ಹೆಚ್ಚಿನ ಗ್ರಾಮ ಸಮಿತಿಯಲ್ಲಿ ಯಾವುದೇ ಮತ ಚಲಾವಣೆಗೊಂಡಿಲ್ಲ. ಒಟ್ಟು ಮತದಾರರಲ್ಲಿ 70% ಮತದಾರರು ಇರುವ ಪಟ್ಟಣ ಮತ್ತು ನಗರಗಳನ್ನು ಒಳಗೊಂಡಿರುವ ಬೃಹತ್ ಕ್ಷೇತ್ರಗಳಲ್ಲಿ ದ್ವಿತೀಯ ಹಂತದಲ್ಲಿ ಮತದಾನ ನಡೆಯಲಿದೆ. ಇದು ಮುಂದಿನ ವರ್ಷದ ಮಾರ್ಚ್ 26ಕ್ಕೆ ನಿಗದಿಯಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಭಜಿಸುವ ಪೆಲೆಸ್ತೀನ್ ಅಥಾರಿಟಿ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ ಸಂಸತ್ ಮತ್ತು ಅಧ್ಯಕ್ಷೀಯ ಚುನಾವಣೆಯನ್ನೂ ಮುಂದೂಡಲಾಗಿದೆ. ಈ ನಿರ್ಧಾರ ವಿರೋಧಿಸಿ ಶನಿವಾರದ ಮತದಾನವನ್ನು ಬಹಿಷ್ಕರಿಸುವುದಾಗಿ ಹಮಾಸ್ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News