ಬಾಹ್ಯಾಕಾಶ ನೌಕೆ ಉಡಾವಣೆಗೆ ಇರಾನ್ ಸಿದ್ಧತೆ‌

Update: 2021-12-13 18:12 GMT
ಸಾಂದರ್ಭಿಕ ಚಿತ್ರ:PTI

ಟೆಹ್ರಾನ್, ಡಿ.13: ಇಮಾಮ್ ಖೊಮೈನಿ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ನೌಕೆ ಉಡಾವಣೆಗೆ ಸಿದ್ಧತೆ ಇರಾನ್ ನಡೆಸುತ್ತಿರುವುದು ಉಪಗ್ರಹಗಳಿಂದ ಲಭಿಸಿದ ಮತ್ತು ತಜ್ಞರ ಅಭಿಪ್ರಾಯದಿಂದ ದೃಢಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೆಮ್ನಾನ್ ಮರುಭೂಮಿ ಪ್ರಾಂತದ ಇಮಾಮ್ ಖೊಮೈನಿ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆಯ ಸಿದ್ಧತೆ ತೀವ್ರಗತಿಯಲ್ಲಿ ನಡೆಯುತ್ತಿರುವುದು ‘ಪ್ಲಾನೆಟ್ ಲ್ಯಾಬ್ಸ್’    ಸಂಗ್ರಹಿಸಿರುವ ಉಪಗ್ರಹ ಚಿತ್ರದಿಂದ ಸ್ಪಷ್ಟವಾಗಿದೆ. ನಾಗರಿಕ ಉದ್ದೇಶದ ಬಾಹ್ಯಾಕಾಶ ನೌಕೆ ಯೋಜನೆ ಇದಾಗಿರಬಹುದು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News