ರಶ್ಯಾ: ಸ್ವಯಂ ಸ್ಫೋಟಿಸಿಕೊಂಡು ಮೃತಪಟ್ಟ ವಿದ್ಯಾರ್ಥಿ

Update: 2021-12-13 18:17 GMT
ಸಾಂದರ್ಭಿಕ ಚಿತ್ರ

ಮಾಸ್ಕೊ, ಡಿ.13: ರಶ್ಯಾದ 14ನೇ ಶತಮಾನದಲ್ಲಿ ಸ್ಥಾಪನೆಗೊಂಡಿರುವ ಕಾನ್ವೆಂಟ್ ಶಾಲೆಯೊಂದರ ಹೊರಗಡೆ ಶಾಲಾ ವಿದ್ಯಾರ್ಥಿಯೊಬ್ಬ ಸ್ವಯಂ ಸ್ಫೋಟಿಸಿಕೊಂಡು ಮೃತಪಟ್ಟಿದ್ದು ಸಹಪಾಠಿಯೊಬ್ಬ ತೀವ್ರ ಗಾಯಗೊಂಡಿದ್ದಾನೆ ಎಂದು ರಶ್ಯಾದ ಒಳಾಡಳಿತ ಸಚಿವಾಲಯ ಹೇಳಿದೆ.

ಮಾಸ್ಕೋದ ಸುಮಾರು 100 ಕಿ.ಮೀ ದೂರದಲ್ಲಿರುವ ಸೆರ್ಪುಖೋವ್ ನಗರದಲ್ಲಿರುವ ವೆಡೆಂಸ್ಕಿ ವ್ಲಾದಿಚಿನಿಯ್ ಕಾನ್ವೆಂಟ್‌ಗೆ  ಬಂದ ಅದೇ ಸಂಸ್ಥೆಯ 18 ವರ್ಷದ ವಿದ್ಯಾರ್ಥಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಈ ದುರಂತದಲ್ಲಿ 15 ವರ್ಷದ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾನೆ ಸಚಿವಾಲಯ ಹೇಳಿದೆ. ಪ್ರಾಥಮಿಕ ವರದಿ ಪ್ರಕಾರ ಅಪರಾಧಿಯು ಸ್ಫೋಟದಿಂದ ಮೃತನಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಸ್ಫೋಟದಿಂದ ಬೇರೆ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬ ಬಗ್ಗೆ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News