ಖ್ಯಾತ ಲೇಖಕಿ ಆ್ಯನೆ ರೈಸ್ ನಿಧನ
Update: 2021-12-13 23:55 IST
ವಾಷಿಂಗ್ಟನ್, ಡಿ.13: ಅಲೌಖಿಕ ಘಟನೆಗಳನ್ನಾಧರಿಸಿದ, ಭಯಾನಕ ಮತ್ತು ರೋಮಾಂಚನಕಾರಿ ಅಂಶಗಳನ್ನು ತನ್ನ ಕಾದಂಬರಿಯಲ್ಲಿ ಸಂಯೋಜಿಸಿ ಓದುಗರ ಮನಗೆದ್ದಿದ್ದ ಅಮೆರಿಕದ ಲೇಖಕಿ ಆ್ಯನೆ ರೈಸ್(80 ವರ್ಷ) ಶನಿವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಹೃದಯಾಘಾತದಿಂದ ರೈಸ್ ಮೃತಪಟ್ಟಿರುವುದಾಗಿ ಅವರ ಪುತ್ರ ಕ್ರಿಸ್ಟೋಫರ್ ರೈಸ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಅವರು ಬರೆದ ‘ರಕ್ತಪಿಶಾಚಿಯೊಂದಿಗೆ ಸಂದರ್ಶನ’ ಅತ್ಯಧಿಕ ಮಾರಾಟಗೊಂಡ ಕಾದಂಬರಿ ಸಾಲಿನಲ್ಲಿ ಸೇರಿದೆ. ಬಳಿಕ 1994ರಲ್ಲಿ ಬಿಡುಗಡೆಗೊಂಡ ಈ ಕೃತಿಯನ್ನಾಧರಿಸಿದ ಸಿನೆಮದಲ್ಲಿ ಟಾಮ್ ಕೂಸ್ ಮತ್ತು ಬ್ರಾಡ್ ಪಿಟ್ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಈ ಕಾದಂಬರಿಯನ್ನು ಆಧರಿಸಿದ ಟಿವಿ ಧಾರಾವಾಹಿ 2022ರಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ. ರೈಸ್ ಅಂತ್ಯಕ್ರಿಯೆ ನ್ಯೂ ಓರ್ಲಿಯನ್ಸ್‌ನಲ್ಲಿನ ಸಮಾಧಿ ಸ್ಥಳದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.