×
Ad

ಈಕ್ವೆಡಾರ್ ನಲ್ಲಿ 5 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ಕಡ್ಡಾಯ

Update: 2021-12-24 23:52 IST
ಸಾಂದರ್ಭಿಕ ಚಿತ್ರ

ಕ್ವಿಟ್ಟೊ,ಡಿ.24: ದಕ್ಷಿಣ ಅಮೆರಿಕದ ರಾಷ್ಟ್ರವಾದ ಈಕ್ವೆಡಾರ್ ಐದು ವರ್ಷದ ಮಕ್ಕಳಿಗೂ ಕೋವಿಡ್19 ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಒಮ್ನಿಕಾರ್ನ್ ಪ್ರಭೇದವು ವ್ಯಾಪಕವಾಗಿ ಹರಡುತ್ತಿದೆಯೆಂಬ ಭೀತಿಯ ನಡುವೆಯೇ ಈಕ್ವೆಡಾರ್‌ನ ಆರೋಗ್ಯ ಸಚಿವಾಲ.ಯ ಈ ಆದೇಶವನ್ನು ಹೊರಡಿಸಿದೆ.

ಐದು ವರ್ಷದ ಮಕ್ಕಳಿಗಕೂ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿರುವ  ಜಗತ್ತಿನ ಮೊದಲ ರಾಷ್ಟ್ರ ಈಕ್ವೆಡಾರ್ ಆಗಿದೆ. ‘‘ಈಕ್ವೇಡಾರ್‌ನಲ್ಲಿ ಕೋವಿಡ್ 19 ವಿರುದ್ಧ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ’’ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಐದು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು ಕೋವಿಡ್19 ಲಸಿಕೆಯನ್ನು ಪಡೆಯುವುದು ಇನ್ನು ಮುಂದೆ ಕಡ್ಡಾಯವಾಗಿರುತ್ತದೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಇದೆ.

ದಕ್ಷಿಣ ಅಮೆರಿಕದ ರಾಷ್ಟ್ರವಾದ ಇಕ್ವೆಡಾರ್ನಲ್ಲಿ 1.77 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಅವರಲ್ಲಿ ಶೇ.69ರಷ್ಟು ಮಂದಿ ಈಗಾಗಲೇ ಲಸಿಕೆಯನ್ನು ಪಡೆದುಕೊಂಡಿದ್ದಾರೆ. 9 ಲಕ್ಷಕ್ಕೂ ಅಧಿಕ ಮಂದಿಗೆ ಬೂಸ್ಟರ್ ಡೋಸ್ ನೀಡಲಾಗಿದೆ.

ವೈದ್ಯಕೀಯ ಕಾರಣಗಳಿರುವ ವ್ಯಕ್ತಿಗಳಿಗೆ ಮಾತ್ರ ಲಸಿಕೆ ಹಾಕಿಸಿಕೊಳ್ಳುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಸಚಿವಾಲಯದ ಹೇಳಿಕೆ. ಈಕ್ವೇಡಾರ್‌ನಲ್ಲಿ ಈವರೆಗೆ 5.40 ಲಕ್ಷ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟು 33,600 ಮಂದಿ ಸಾವನ್ನಪ್ಪಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News