×
Ad

ಬಾಂಗ್ಲಾದೇಶ: ನೌಕೆಯಲ್ಲಿ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿ ನೌಕೆಯ ಮಾಲಕನ ಬಂಧನ

Update: 2021-12-27 23:31 IST
photo:twitter/@Zia68

ಢಾಕ, ಡಿ.27: ಕಳೆದ ವಾರ ನೌಕೆಯಲ್ಲಿ ಬೆಂಕಿ ದುರಂತ ಸಂಭವಿಸಿ 39 ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ನೌಕೆಯ ಮಾಲಕನನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ಪೊಲೀಸರು ಸೋಮವಾರ ಹೇಳಿದ್ದಾರೆ.

ನಿಗದಿತ ಮಿತಿಗಿಂತ ಅಧಿಕ ಜನರನ್ನು ತುಂಬಿಸಿದ್ದು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ನೌಕೆಯ ಮಾಲಕ ಹಮ್‌ಜಲಾಲ್  ಶೇಖ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನೌಕೆಯ ಮಾಲಕ ಹಾಗೂ ಸಿಬಂದಿ ಸಹಿತ 7 ಆರೋಪಿಗಳ ಬಂಧನಕ್ಕೆ ರವಿವಾರ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು. ಶುಕ್ರವಾರ ರಾತ್ರಿ ಈ ದುರಂತ ನಡೆದಿದೆ. 420 ಮಂದಿ ಪ್ರಯಾಣಿಸುವ ಸಾಮರ್ಥ್ಯವಿರುವ ನೌಕೆಯಲ್ಲಿ 700 ಮಂದಿ ಪ್ರಯಾಣಿಸುತ್ತಿದ್ದರು. ಆಗ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಿದ್ದೆಯಲ್ಲಿದ್ದ ಪ್ರಯಾಣಿಕರಲ್ಲಿ ಹಲವರು ಬೆಂಕಿಯಲ್ಲಿ ಬೆಂದು ಹೋದರೆ, ಇನ್ನೂ ಕೆಲವರು ಜೀವ ಉಳಿಸಿಕೊಳ್ಳಲು ನೌಕೆಯಿಂದ ಸಮುದ್ರಕ್ಕೆ ಹಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News