×
Ad

ಅಮೆರಿಕ: ಮಾಜಿ ಸಂಸದ ಹ್ಯಾರಿ ರೀಡ್ ನಿಧನ

Update: 2021-12-29 23:02 IST
 ಹ್ಯಾರಿ ರೀಡ್(photo:twitter)

ವಾಷಿಂಗ್ಟನ್, ಡಿ.29: ಬಡ ಗಣಿ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಅಮೆರಿಕದ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡ ಅಮೆರಿಕದ ಮಾಜಿ ಸಂಸದ, ಸಂಸದೀಯ ವ್ಯವಹಾರ ಇಲಾಖೆಯ ಮಾಜಿ ವಕ್ತಾರ ಹ್ಯಾರಿ ರೀಡ್ (82 ವರ್ಷ) ಮಂಗಳವಾರ ನಿಧನರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಬಾಕ್ಸರ್ ಆಗಿದ್ದ ರೀಡ್ 3 ದಶಕಗಳಿಗೂ ಹೆಚ್ಚು ಅವಧಿಗೆ ನೆವಾಡ ಕ್ಷೇತ್ರದ ಡೆಮೊಕ್ರಾಟ್ ಸಂಸದನಾಗಿ ಆಯ್ಕೆಗೊಂಡಿದ್ದರು. ಮೇದೀಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಲಾಂಡ್ರಾ ಹೇಳಿದ್ದಾರೆ. 2007ರಲ್ಲಿ ಸೆನೆಟ್‌ನಲ್ಲಿ ಡೆಮೊಕ್ರಾಟ್ ಪಕ್ಷಕ್ಕೆ ಬಹುಮತ ಲಭಿಸಿದ ಬಳಿಕ ಅವರು ಸಂಸದೀಯ ವ್ಯವಹಾರದ ವಕ್ತಾರರಾಗಿ ನಿಯುಕ್ತಿಗೊಂಡಿದ್ದರು. ಒಬಾಮಾ ಅಧ್ಯಕ್ಷರಾಗಿದ್ದ ಸಂದರ್ಭ ಅವರಿಗೆ ಅತ್ಯಂತ ನಿಕಟವಾಗಿದ್ದ ರೀಡ್, ಒಬಾಮಾಕೇರ್ ಎಂದೇ ಹೆಸರಾದ ಒಬಾಮಾರ ಮಹಾತ್ವಾಕಾಂಕ್ಷೆಯ ಆರೋಗ್ಯಕ್ಷೇತ್ರದ ಕಾಯ್ದೆಗೆ ಸೆನೆಟ್ನ ಅನುಮೋದನೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News