ಬಾವಿಯಲ್ಲಿ ಮೂರು ದಿನಗಳ ಕಾಲ ಸಿಕ್ಕಿಕೊಂಡಿದ್ದ ಮಗು ಸಾವು

Update: 2022-02-18 18:09 GMT

ಸಾಂದರ್ಭಿಕ ಚಿತ್ರ

ಕಂದಹಾರ್ (ಅಫ್ಘಾನಿಸ್ತಾನ), ಫೆ. 18: ಅಫ್ಘಾನಿಸ್ತಾನದ ಹಳ್ಳಿಯೊಂದರ ಬಾವಿಯಲ್ಲಿ ಮೂರು ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಐದು ವರ್ಷದ ಮಗುವೊಂದನ್ನು ಜೀವಂತವಾಗಿ ಮೇಲೆತ್ತಲಾಯಿತಾದರೂ, ಕೆಲವೇ ಕ್ಷಣಗಳಲ್ಲಿ ಅದು ಕೊನೆಯುಸಿರೆಳೆದಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಕಾಬೂಲ್‌ನಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ಝಬುಲ್ ಪ್ರಾಂತದ ಶೋಕಾಕ್ ಎಂಬಲ್ಲಿ ತೋಡಲಾಗುತ್ತಿದ್ದ ಬಾವಿಗೆ ಹೈದರ್ ಎಂಬ ಹೆಸರಿನ ಮಗು ಮಂಗಳವಾರ ಆಕಸ್ಮಿಕವಾಗಿ ಬಿದ್ದಿದೆ. ಮಗು ಬಾವಿಯ ತಳದಲ್ಲಿ ಮೂರು ದಿನಗಳ ಕಾಲ ಸಿಕ್ಕಿಕೊಂಡಿತ್ತು.

‘‘ರಕ್ಷಣಾ ಕಾರ್ಯಕರ್ತರು ಮಗುವಿದ್ದಲ್ಲಿಗೆ ತಲುಪಿದಾಗ ಮಗು ಉಸಿರಾಡುತ್ತಿತ್ತು. ಮೇಲಕ್ಕೆತ್ತಿದ ಕೆಲ ನಿಮಿಷಗಳವರೆಗೂ ಅದು ಜೀವಂತವಾಗಿತ್ತು. ವೈದ್ಯಕೀಯ ತಂಡವು ಮಗುವಿಗೆ ಆಮ್ಲಜನಕ ನೀಡಿತು. ಮಗುವನ್ನು ಹೆಲಿಕಾಪ್ಟರ್‌ನಲ್ಲಿ ಒಯ್ಯಲು ಎತ್ತಿದಾಗ ಪ್ರಾಣ ಬಿಟ್ಟಿತು’’ ಎಂದು ಝಾಬುಲ್ ಪೊಲೀಸ್ ವಕ್ತಾರರೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News