ಉಕ್ರೇನ್ ಗೆ 800 ಮಿಲಿಯನ್ ಡಾಲರ್ ಹೆಚ್ಚುವರಿ ಭದ್ರತಾ ನೆರವು: ಅಮೆರಿಕ ನಿರ್ಧಾರ

Update: 2022-03-16 18:05 GMT

ವಾಷಿಂಗ್ಟನ್, ಮಾ.16: ಉಕ್ರೇನ್ಗೆ ಹೆಚ್ಚುವರಿಯಾಗಿ 800 ಮಿಲಿಯನ್ ಡಾಲರ್ ಮೊತ್ತದ ಭದ್ರತಾ ನೆರವು ಒದಗಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದು ಇದರೊಂದಿಗೆ ಕಳೆದ ವಾರ ಘೋಷಿಸಿದ ಒಟ್ಟು ನೆರವಿನ ಮೊತ್ತ 1 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ. ‌

ಬುಧವಾರ ವರ್ಚುವಲ್ ವೇದಿಕೆಯ ಮೂಲಕ ಅಮೆರಿಕದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಹೆಚ್ಚುವರಿ ನೆರವಿನ ಕೋರಿಕೆ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣ 800 ಮಿಲಿಯನ್ ಡಾಲರ್ ಮೊತ್ತದ ಹೆಚ್ಚುವರಿ ನೆರವು ಒದಗಿಸಲಿ ಬೈಡನ್ ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹೆಚ್ಚುವರಿ ನೆರವಿನಲ್ಲಿ ಸ್ಟಿಂಜರ್ ಕ್ಷಿಪಣಿ, ಜಾವೆಲಿನ್ ಕ್ಷಿಪಣಿ ಮತ್ತು ಕ್ಷಿಪಣಿ ನಿರೋಧಕ ವ್ಯವಸ್ಥೆ, ರೇಡಾರ್ ವ್ಯವಸ್ಥೆ, ಹೆಲಿಕಾಪ್ಟರ್ಗಳು, ಗ್ರೆನೇಡ್ ಉಡಾವಣಾ ವ್ಯವಸ್ಥೆ, ಬಂದೂಕು ಮತ್ತು ಮದ್ದುಗುಂಡುಗಳು, ಇತರ ಶಸ್ತ್ರಾಸ್ತ್ರಗಳು ಇರಲಿವೆ. ಉಕ್ರೇನ್ಗೆ ಅತ್ಯಂತ ಹೆಚ್ಚಿನ ನೆರವು ಅಮೆರಿಕದಿಂದ ಲಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News