ಸ್ವೀಡನ್: ಇಬ್ಬರು ಶಿಕ್ಷಕರ ಹತ್ಯೆ ಪ್ರಕರಣದಲ್ಲಿ ವಿದ್ಯಾರ್ಥಿಯ ಬಂಧನ

Update: 2022-03-22 18:08 GMT

ಸ್ಟಾಕ್ಹೋಮ್, ಮಾ.22: ಸ್ವೀಡನ್ನ ದಕ್ಷಿಣ ಪ್ರಾಂತದ ಮಾಲ್ಮೊ ನಗರದಲ್ಲಿನ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರ ಹತ್ಯೆಗೆ ಸಂಬಂಧಿಸಿ 18 ವರ್ಷದ ವಿದ್ಯಾರ್ಥಿಯನ್ನು ಹತ್ಯೆ ನಡೆದ ಸ್ಥಳದಲ್ಲೇ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

 ಸುಮಾರು 50 ವರ್ಷದ ಇಬ್ಬರು ಶಿಕ್ಷಕರನ್ನು ಮಾಲ್ಮೊದ ಲ್ಯಾಟಿನ್ ಶಾಲೆಯಲ್ಲಿ ಹತ್ಯೆ ಮಾಡಲಾಗಿತ್ತು. ಬಳಿಕ ಪೊಲೀಸರಿಗೆ ಕರೆ ಮಾಡಿದ ವಿದ್ಯಾರ್ಥಿ, ತಾನು ಇಬ್ಬರನ್ನು ಹತ್ಯೆ ಮಾಡಿದ್ದು ಆಯುಧವನ್ನು ಸ್ಥಳದಲ್ಲೇ ಬಿಟ್ಟು ಈಗ ಶಾಲೆಯ ಮೂರನೇ ಮಹಡಿಯಲ್ಲಿದ್ದೇನೆ ಎಂದು ಹೇಳಿದ್ದ. ಅದರಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು 18 ವರ್ಷದ ಯುವಕನನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

 ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಹತ್ಯೆಗೆ ಕಾರಣವನ್ನು ಹೆಚ್ಚಿನ ತನಿಖೆಯಿಂದ ತಿಳಿದುಬರಲಿದೆ. ಆರೋಪಿ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು ಸ್ಥಳದಲ್ಲಿ ದೊರೆತ ಆಯುಧವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಮಾಲ್ಮೊ ಪೊಲೀಸ್ ಮುಖ್ಯಸ್ಥೆ ಪೆಟ್ರಾ ಸ್ಟೆಂಕುಲಾ ಸುದ್ಧಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News