×
Ad

ರಶ್ಯದ ಪ್ರದೇಶಕ್ಕೆ ನುಗ್ಗಿ ತೈಲ ಡಿಪೊದ ಮೇಲೆ ದಾಳಿ ನಡೆಸಿದ ಉಕ್ರೇನ್

Update: 2022-04-01 23:54 IST
photo courtesy:twitter/@sentdefender


ಮಾಸ್ಕೋ ಎ.1: ಈ ವಾರ ಉಕ್ರೇನ್ ಹೆಲಿಕಾಪ್ಟರ್ ಗಳು ಪಶ್ಚಿಮ ರಶ್ಯದ ವಾಯುಪ್ರದೇಶದೊಳಗೆ ನುಗ್ಗಿ ತೈಲ ದಾಸ್ತಾನು ಕೇಂದ್ರದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ರಶ್ಯದ ಬೆಲ್‌ಗೊರೊಡ್ ನಲ್ಲಿನ ತೈಲ ದಾಸ್ತಾನು ಕೇಂದ್ರವನ್ನು ಗುರಿಯಾಗಿಸಿ ಉಕ್ರೇನ್ ನ ಎಂಐ-24 ಹೆಲಿಕಾಪ್ಟರ್ ಹಲವು ಕ್ಷಿಪಣಿ ದಾಳಿ ನಡೆಸಿರುವುದು ಹಾಗೂ ಇದರಿಂದ ತೈಲ ದಾಸ್ತಾನು ಕೇಂದ್ರದಲ್ಲಿ ಭಾರೀ ಸ್ಫೋಟ ಸಂಭವಿಸಿದ ವೀಡಿಯೊ ವೈರಲ್ ಆಗಿದೆ. 
ಸಂಘರ್ಷ ಆರಂಭವಾದ ಬಳಿಕ ಇದೇ ಪ್ರಥಮ ಬಾರಿಗೆ ತನ್ನ ಪ್ರದೇಶದ ಮೇಲೆ ಉಕ್ರೇನ್ ದಾಳಿ ಎಸಗಿರುವುದನ್ನು ರಶ್ಯ ದೃಢಪಡಿಸಿದೆ.
ಉಕ್ರೇನ್ 2 ಸೇನಾ ಹೆಲಿಕಾಪ್ಟರ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಪೆಟ್ರೋಲ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ ಅಲ್ಲಿದ್ದ ಇಬ್ಬರು ಸಿಬಂದಿಗಳಿಗೆ ಗಾಯವಾಗಿದೆ ಎಂದು ಬೆಲ್‌ಗೊರೊಡ್ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಹೇಳಿದ್ದಾರೆ. ಬೆಲ್‌ಗೊರೊಡ್ ಉಕ್ರೇನ್ ನ ಖಾರ್ಕಿವ್ ನಗರದಿಂದ 80 ಕಿಮೀ ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News