'ಗಾಳಿಯೊಂದಿಗೆ ಹಸ್ತಲಾಘವ': ಮುಜುಗರಕ್ಕೆ ಒಳಗಾದ ಬೈಡನ್

Update: 2022-04-15 17:54 GMT

ನ್ಯೂಯಾರ್ಕ್, ಎ.15: ನಾರ್ಥ್ ಕ್ಯರೋಲಿನಾ ಕೃಷಿ ಮತ್ತು ತಾಂತ್ರಿಕ ವಿವಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ಗೆ ಮುಜುಗುರಕ್ಕೆ ಒಳಗಾದ ಘಟನೆ ಗುರುವಾರ ನಡೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೇದಿಕೆಯಲ್ಲಿ ನಿಂತು ಉಪನ್ಯಾಸ ನೀಡಿದ ಬೈಡನ್, ಮಾತು ಮುಗಿಸಿದ ಬಳಿಕ ಹಿಂದಕ್ಕೆ ತಿರುಗಿ ಹಸ್ತಲಾಘವ ನೀಡಲು ತನ್ನ ಕೈಯನ್ನು ಮುಂದೆ ಚಾಚಿದ್ದರು. ಆದರೆ ವೇದಿಕೆಯಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬುದನ್ನು ಅವರು ಮರೆತಿದ್ದರು. ಇದನ್ನು ಕಂಡ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿದಾಗ ಅರೆಕ್ಷಣ ವಿಚಲಿತರಾದ ಬೈಡನ್ ತಕ್ಷಣ ವೇದಿಕೆುಂದ ನಿರ್ಗಮಿಸಿದರು.

ಪೂರೈಕೆ ಸರಪಳಿಯಲ್ಲಿನ ಬಿಕ್ಕಟ್ಟು ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯ ಅಗತ್ಯದ ಕುರಿತು ಬೈಡನ್ ಭಾಷಣ ಮಾಡುತ್ತಿದ್ದರು. ಆದರೆ ಭಾಷಣದ ಮಧ್ಯೆ ಅವರು ಪೆನಿಸಿಲ್ವೇನಿಯಾ ವಿವಿಯಲ್ಲಿ ತಾನು ಪೂರ್ಣಪ್ರಮಾಣದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದೆ, ಆದರೆ ಒಂದು ತರಗತಿೂ ಪಾಠ ಮಾಡಿಲ್ಲ ಎಂದು ಹೇಳಿದ್ದು, 
ಈ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ, ಟಿಪ್ಪಣಿ ವ್ಯಕ್ತವಾಗಿದೆ. ಬೈಡನ್ರನ್ನು ಉತ್ತಮರನ್ನಾಗಿ ಕಾಣುವಂತೆ ಮಾಡಬೇಕಿದ್ದ ಶ್ವೇತಭವನದ ಸಿಬಂದಿ ಹಾಗೂ ಬೈಡನ್ರ ಕುಟುಂಬದವರು ಎಲ್ಲಿದ್ದಾರೆ. ಬೈಡನ್ರನ್ನು ಬುದ್ಧಿಮಾಂದ್ಯರಂತೆ ಪ್ರಸ್ತುತಡಿಸಲು ಅವರು ಬಯಸಿದ್ದಾರೆಯೇ? ಎಂದು ರಿಪಬ್ಲಿಕನ್ ಪಕ್ಷದ ನಾಯಕಿ ಹಮಿರ್ೀತ್ ಕೆ ಧಿಲ್ಲೋನ್ ಪ್ರಶ್ನಿಸಿದ್ದಾರೆ.

ಈ ವ್ಯಕ್ತಿ ಅಧ್ಯಕ್ಷನಾಗಲು ನಾಲಾಯಕ್ಕು’ ಎಂದು ಮತ್ತೊಬ್ಬ ಪ್ರಮುಖ ರಾಜಕೀಯ ಮುಖಂಡ ರಾಬಿ ಸ್ಟರ್ಬಕ್ ಟ್ವೀಟ್ ಮಡಿದ್ದಾರೆ. ಈ ಪ್ರಕರಣದ ಬಗ್ಗೆ ತಮಾಷೆಯಾಗಿ ಹಲವು ಮೀಮ್ಗಳು, ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News