ಜೇಲಾಂಡ್ ವಾಕರ್ ಹತ್ಯೆ ಪ್ರಕರಣ: ಆರೋಪಿ ಅಧಿಕಾರಿಗಳಿಗೆ ಆಡಳಿತಾತ್ಮಕ ರಜೆ

Update: 2022-07-03 17:42 GMT

ವಾಷಿಂಗ್ಟನ್, ಜು.2: ಅಮೆರಿಕದಲ್ಲಿ ಪೊಲೀಸರ ಗುಂಡೇಟಿನಿಂದ ಕಪ್ಪುವರ್ಣೀಯ ವ್ಯಕ್ತಿ ಜೇಲ್ಯಾಂಡ್ ವಾಕರ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ, ಘಟನೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ತನಿಖೆ ಬಾಕಿ ಇರುವ ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. 

ಪೊಲೀಸ್ ಕಾರ್ಯಾಚರಣೆ ಖಂಡಿಸಿ ಅಮೆರಿಕದ ಅಕ್ರೋನ್‌ನಲ್ಲಿ ಶುಕ್ರವಾರ ನಾಗರಿಕರು ಪ್ರತಿಭಟನೆ ನಡೆಸಿದ್ದರು.  ಪೊಲೀಸರು 25 ವರ್ಷದ ವಾಕರ್ ಬೆನ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ . ಆತನ ದೇಹದಲ್ಲಿ ಸುಮಾರು 80 ಗಾಯಗಳಿದ್ದವು ಎಂದು ವಾಕರ್ ಕುಟುಂಬದ ವಕೀಲರು ಹೇಳಿದ್ದಾರೆ. ಘಟನೆ ನಡೆದ ಸಂದರ್ಭದ ಬಾಡಿ ಕ್ಯಾಮೆರಾ ದೃಶ್ಯಾವಳಿ ತನಗೆ ಲಭಿಸಿದ್ದು ಅದರಲ್ಲಿ ವಾಕರ್ ಪೊಲೀಸರತ್ತ ಗುಂಡು ಹಾರಿಸಿದ್ದಕ್ಕೆ ಪುರಾವೆಗಳಿಲ್ಲ. ಗುಂಡೇಟು ತಗುಲಿದಾಗ ಅವರು ಓಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ ಎಂದು ವಕೀಲರು ಹೇಳಿದ್ದಾರೆ.  

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಜೇಲ್ಯಾಂಡ್ ವಾಕರ್‌ನನ್ನು  ಬೆನ್ನಟ್ಟಿದ ಪೊಲೀಸರ ಕಾರಿನ ಮೇಲೆ ವಾಕರ್ ಗುಂಡಿನ ಮಳೆಗರೆದಿದ್ದಾನೆ. ಬಳಿಕ ಕಾರನ್ನು ನಿಧಾನಗತಿಗೆ ತಂದು ಚಲಿಸುತ್ತಿದ್ದ ಕಾರಿಂದ ಹೊರಗೆ ಹಾರಿ ಓಡಿದ್ದಾನೆ. ಆತನ  ಹಿಂದಿನಿಂದ ಪೊಲೀಸರೂ ಓಡಿದ್ದು ಕಡೆಗೆ ಆತನನ್ನು ಸುತ್ತುವರಿಯಲು ಯಶಸ್ವಿಯಾಗಿದ್ದಾರೆ. ಆದರೆ ಆತ ಶರಣಾಗಲು ಒಪ್ಪದೆ ಪೊಲೀಸರತ್ತ ಗುಂಡು ಹಾರಿಸಿದಾಗ ಪೊಲೀಸರೂ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು ವಾಕರ್ ಮೃತಪಟ್ಟಿದ್ದಾನೆ ಎಂದು  ಎಂದು ಓಹಿಯೊ ಪ್ರಾಂತದ ಅಕ್ರೋನ್ ನಗರದ ಪೊಲೀಸರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News