×
Ad

ಫ್ರಾನ್ಸ್: ಮಾಕ್ರನ್ ಸರಕಾರಕ್ಕೆ ಹಿನ್ನಡೆ

Update: 2022-07-13 23:44 IST

ಪ್ಯಾರಿಸ್, ಜು.13: ಫ್ರಾನ್ಸ್ನಲ್ಲಿ ಕಳೆದ ತಿಂಗಳು ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್ ಅವರ ಆಡಳಿತಾರೂಢ ಪಕ್ಷ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡ ಬಳಿಕ, ಸರಕಾರಕ್ಕೆ ಸಂಸತ್ತಿನಲ್ಲಿ ಮೊದಲ ಹಿನ್ನಡೆಯಾಗಿದ್ದು ಮಸೂದೆಯೊಂದಕ್ಕೆ ಅನುಮೋದನೆ ಪಡೆಯಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
 
ಫ್ರಾನ್ಸ್ಗೆ ಆಗಮಿಸುವ ಪ್ರಯಾಣಿಕರು ಲಸಿಕೆ ಪಡೆದ ಪ್ರಮಾಣ ಪತ್ರ ಅಥವಾ ಕೋವಿಡ್ ಪರೀಕ್ಷೆಯ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ಹೊಂದಿರಬೇಕು ಎಂಬ ಮಸೂದೆಗೆ ಸಂಸತ್ತಿನ ಬೆಂಬಲ ಪಡೆಯಲು ಮಾಕ್ರನ್ ಸರಕಾರ ವಿಫಲವಾಗಿದೆ. ಮಸೂದೆಯ ಪರ 195, ವಿರೋಧವಾಗಿ 219 ಸದಸ್ಯರು ಮತ ಚಲಾಯಿಸಿದರು. ಇದರೊಂದಿಗೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳಾದ ನ್ಯಾಷನಲ್ ರ್ಯಾಲಿ ಪಕ್ಷ, ಎಲ್ಎಫ್ಐ ಪಕ್ಷ ಹಾಗೂ ರಿಪಬ್ಲಿಕನ್ ಪಕ್ಷಗಳು ಅಲ್ಪಮತಕ್ಕೆ ಕುಸಿದಿರುವ ಸರಕಾರದ ವಿರುದ್ಧ ಒಗ್ಗೂಡಿರುವುದು ಸಾಬೀತಾಗಿದೆ ಎಂದು ಮಾಧ್ಯಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News