ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ಹಿಂತಿರುಗಿ: ಭಾರತೀಯ ಮೂಲದ ಅಮೆರಿಕದ ಸಂಸದೆಗೆ ಬೆದರಿಕೆ

Update: 2022-09-10 10:28 GMT
Photo: Twitter/@RepJayapal

ವಾಶಿಂಗ್ಟನ್: ನೀವು ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ಹಿಂತಿರುಗಿ ಎಂದು ತನಗೆ ಪ್ರಾಣ ಬೆದರಿಕೆ ಸಂದೇಶಗಳು ಬಂದಿವೆ ಎಂದು ಭಾರತೀಯ ಮೂಲದ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್(Pramila Jayapal) ಹೇಳಿದ್ದಾರೆ.

ಈ ಕುರಿತು ತಮ್ಮ ಟ್ವಿಟರ್ ನಲ್ಲಿ ತಮ್ಮ ಆತಂಕ ತೋಡಿಕೊಂಡಿದ್ದು, "ಹಿಂಸೆಯನ್ನು ನಮ್ಮ ಇತ್ತೀಚಿನ ಹವ್ಯಾಸ ಮತ್ತು ರೂಢಿ ಎಂದು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಓರ್ವ ಕರೆ ಮಾಡಿ, ಐದು ನಿಂದನೀಯ ಧ್ವನಿ ಮೇಲ್‍ಗಳನ್ನು(Voice mail) ಹಂಚಿಕೊಂಡಿದ್ದಾನೆ ಎಂದವರು ಟ್ವೀಟ್ ಮಾಡಿದ್ದಾರೆ.  

ಜಯಪಾಲ್ ಅಂತಹ ಐದು ಧ್ವನಿಮೇಲ್‍ಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, "ನೀವು ಪುರುಷರೇ?, ನೀವು ಎಲ್ಲಿಂದ ಬಂದಿದ್ದೀರೊ, ಅಲ್ಲಿಗೆ ಏಕೆ ಹಿಂತಿರುಗಬಾರದು"? ಎಂದಿದೆ. ಇನ್ನೊಂದು ಧ್ವನಿ ಮೇಲ್ ನಲ್ಲಿ ಕರೆ ಮಾಡಿದವರು, ಅಧ್ಯಕ್ಷರನ್ನು ನೇಮಿಸಿದ ತಕ್ಷಣ ಪ್ರಮೀಳಾ ಅವರನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ಸದಸ್ಯರಾದ ಪ್ರಮೀಳಾ ಜಯಪಾಲ್, 2016 ರಲ್ಲಿ ಸಂಯುಕ್ತ ಅಮೆರಿಕಾದ ರಾಜ್ಯ ಜನಪ್ರತಿನಿಧಿ ಹೌಸ್‍ನಲ್ಲಿ ಪ್ರಥಮ ಭಾರತೀಯ ಮೂಲದ ಮಹಿಳೆ ಸಂಸದೆಯಾಗಿ ಸೇವೆಗೈದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ಜುಲೈ ತಿಂಗಳಿನಲ್ಲಿ ಸಿಯಾಟಲ್ ನಗರದ ಜಯಪಾಲ್ ಅವರ ಮನೆಯ ಹೊರಗೆ ಪಿಸ್ತೂಲ್ ಹಿಡಿದ ವ್ಯಕ್ತಿಯೋರ್ವ ಕಾಣಿಸಿಕೊಂಡಿದ್ದರ ಕುರಿತು ಪಿಟಿಐ ವರದಿ ಮಾಡಿತ್ತು. ನಂತರ ಪೊಲೀಸರು 49 ವರ್ಷದ ಆರೋಪಿಯನ್ನು ಬಂಧಿಸಿದ್ದರು. ಇತ್ತೀಚಿಗೆ ಜನಾಂಗೀಯ ಮತ್ತು ಧರ್ಮದ ಆಧಾರದ ಮೇಲೆ ಅಮೆರಿಕದಲ್ಲಿ ಭಾರತೀಯರನ್ನು ಗುರಿಯಾಗಿಸಿ ಬೆದರಿಕೆ ಹಾಕುತ್ತಿರುವ ಘಟನೆಗಳು ಹೆಚ್ಚಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News