ತೈವಾನ್‌ನಲ್ಲಿ ಬಲ ಪ್ರಯೋಗದ ಹಕ್ಕನ್ನು ಚೀನಾ ತ್ಯಜಿಸುವುದಿಲ್ಲ: ಕ್ಸಿ ಜಿನ್‌ಪಿಂಗ್

Update: 2022-10-16 09:09 GMT
ಕ್ಸಿ ಜಿನ್‌ಪಿಂಗ್, Photo:twitter

ಬೀಜಿಂಗ್: ತೈವಾನ್‌ನಲ್ಲಿ ಬಲವನ್ನು ಬಳಸುವ ಹಕ್ಕನ್ನು ತ್ಯಜಿಸುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ Chinese President Xi Jinping ರವಿವಾರ ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಸ್ವ-ಆಡಳಿತ ದ್ವೀಪ ತೈವಾನ್ ನನ್ನು ಚೀನೀ ಮುಖ್ಯ ಭೂಭಾಗದೊಂದಿಗೆ ಏಕೀಕರಿಸುವ ಪ್ರಾಂತ್ಯವೆಂದು ಬೀಜಿಂಗ್ ಪರಿಗಣಿಸುತ್ತದೆ.

"ನಾವು ಪ್ರತ್ಯೇಕತಾವಾದದ ವಿರುದ್ಧ ದೃಢವಾದ ಹೋರಾಟವನ್ನು ನಡೆಸಿದ್ದೇವೆ ಮತ್ತು ತೈವಾನ್‌ನ ಸ್ವಾತಂತ್ರ್ಯವನ್ನು ವಿರೋಧಿಸುತ್ತೇವೆ. ನಾವು ಅತ್ಯಂತ ಪ್ರಾಮಾಣಿಕತೆ ಮತ್ತು ಹೆಚ್ಚಿನ ಪ್ರಯತ್ನಗಳೊಂದಿಗೆ ಶಾಂತಿಯುತ ಪುನರೇಕೀಕರಣದ ನಿರೀಕ್ಷೆಗೆ ಬದ್ಧರಾಗಿರುತ್ತೇವೆ, ಆದರೆ ಬಲದ ಬಳಕೆಯನ್ನು ತ್ಯಜಿಸಲು ಎಂದಿಗೂ ಬದ್ಧರಾಗುವುದಿಲ್ಲ" ಎಂದು ಕ್ಸಿ ಹೇಳಿದರು.

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ 20 ನೇ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಕ್ಸಿ ಈ ಹೇಳಿಕೆಗಳನ್ನು ನೀಡಿದ್ದಾರೆ.  ಇದು ಒಂದು ವಾರದ ಅವಧಿಯ ಕಾರ್ಯಕ್ರಮವಾಗಿದ್ದು, ಕ್ಸಿ ಅವರು ದೇಶದ ಅಧ್ಯಕ್ಷನಾಗಿ ತಮ್ಮ ಮೂರನೇ ಅವಧಿಯನ್ನು ಭದ್ರಪಡಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News