ವಿಶ್ವಕಪ್ ನಲ್ಲಿ ಫ್ರಾನ್ಸ್ ಗೆ ಸೋಲು: ಪ್ಯಾರಿಸ್ ನಲ್ಲಿ ಗಲಭೆ, ಫುಟ್ಬಾಲ್ ಅಭಿಮಾನಿಗಳ ವಿರುದ್ಧ ಅಶ್ರುವಾಯು ಪ್ರಯೋಗ

Update: 2022-12-19 08:19 GMT

ಪ್ಯಾರಿಸ್: ಖತರ್‌ನಲ್ಲಿ ನಡೆದ 2022 ರ ವಿಶ್ವಕಪ್ ಫೈನಲ್‌ನಲ್ಲಿ ತಮ್ಮ ರಾಷ್ಟ್ರೀಯ ತಂಡ ಅರ್ಜೆಂಟೀನದ ವಿರುದ್ಧ ಸೋತ ನಂತರ ಪ್ಯಾರಿಸ್‌ನ ಪ್ರಸಿದ್ಧ ಚಾಂಪ್ಸ್-ಎಲಿಸೀಸ್‌ನಲ್ಲಿ ನೆರೆದಿದ್ದ ಅಭಿಮಾನಿಗಳ ಗುಂಪು ಬೀದಿಗಳಲ್ಲಿ  ಗಲಭೆ ನಡೆಸಿದ್ದು, ಅಭಿಮಾನಿಗಳನ್ನು  ಚದುರಿಸಲು ಫ್ರೆಂಚ್ ಪೊಲೀಸರು ಅಶ್ರುವಾಯು ಬಳಸಿದ್ದಾರೆ ಎಂದು ರಷ್ಯಾದ ಸರಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ರವಿವಾರ ವರದಿ ಮಾಡಿದೆ.

ರವಿವಾರ ನಡೆದ ವಿಶ್ವಕಪ್ ಫೈನಲ್ ನಲ್ಲಿ  ಅರ್ಜೆಂಟೀನ ತಂಡ ಹೆಚ್ಚುವರಿ ಸಮಯದ ನಂತರ 3-3 ಡ್ರಾ  ಆದ ನಂತರ ಪೆನಾಲ್ಟಿಯಲ್ಲಿ ಫ್ರಾನ್ಸ್ ಅನ್ನು 4-2 ರಿಂದ ಸೋಲಿಸಿತು ಹಾಗೂ  ಮೂರನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು.

ಎಂಬಾಪೆ ಅವರ ಹ್ಯಾಟ್ರಿಕ್ ಗೋಲು ಹೊರತಾಗಿಯೂ ಫ್ರಾನ್ಸ್ ತಂಡ ಪ್ರಶಸ್ತಿ ಎತ್ತಿ ಹಿಡಿಯಲು ವಿಫಲವಾಯಿತು.

Similar News