×
Ad

ಅಂಪೈರ್ ಮೇಲೆ ರೇಗಾಡಿದ ಶಾಕಿಬ್ ಅಲ್ ಹಸನ್; ವೀಡಿಯೊ ವೈರಲ್

Update: 2023-01-08 10:41 IST

ಢಾಕಾ: ಬಾಂಗ್ಲಾದೇಶದ ಹಿರಿಯ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ (Shakib Al Hasan) ಮೈದಾನದಲ್ಲಿ ವಿಶೇಷವಾಗಿ ಅಂಪೈರ್ ಮೇಲೆ  ತನ್ನ ಹತಾಶೆಯನ್ನು ಹೊರಹಾಕುತ್ತಲೇ ಇರುತ್ತಾರೆ. ಹಲವಾರು ಸಂದರ್ಭಗಳಲ್ಲಿ ದೇಶಿಯ ಕ್ರಿಕೆಟ್ ಪಂದ್ಯದ ವೇಳೆ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ವೈಡ್-ಬಾಲ್ ನಿರ್ಧಾರಕ್ಕೆ ಸಂಬಂಧಿಸಿ ಶಾಕಿಬ್ ಅವರು ಲೆಗ್-ಅಂಪೈರ್‌ ಮೇಲೆ ರೇಗಾಡಿರುವ ಘಟನೆ ನಡೆದಿದೆ. ಅಂಪೈರ್ ತನ್ನ ಪರವಾಗಿ ನಿರ್ಧಾರ  ಕೈಗೊಳ್ಳದ್ದಕ್ಕೆ  ಶಾಕಿಬ್ ಅಂಪೈರ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ಅನ್ನು ಹೇಗೆ ನಡೆಸಲಾಗುತ್ತಿದೆ ಎಂಬುದರ ಕುರಿತು ಶಾಕಿಬ್ ಸಾರ್ವಜನಿಕವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ತನ್ನನ್ನು ಉಸ್ತುವಾರಿಯನ್ನಾಗಿಸಿದರೆ ತಪ್ಪುಗಳನ್ನು  ಸರಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಇದೀಗ, ಬಿಪಿಎಲ್‌ನಲ್ಲಿಯೇ ಬಾಂಗ್ಲಾದೇಶದ ಸ್ಟಾರ್  ಮತ್ತೆ ಸುದ್ದಿ ಮಾಡುತ್ತಿದ್ದಾರೆ.

ಬಿಪಿಎಲ್ ಪಂದ್ಯವೊಂದರಲ್ಲಿ ಬೌನ್ಸರ್ ಎಸೆತವನ್ನು ವೈಡ್ ಎಂದು ನಿರ್ದರಿಸಲಾಗಲಿಲ್ಲ. ಈ ನಿರ್ಧಾರದಿಂದ ಹತಾಶೆಗೊಂಡ ಶಾಕಿಬ್  ಅವರು ಅಂಪೈರ್‌ ಮೇಲೆ ರೇಗಾಡಿದರು. ಈ  ನಿರ್ಧಾರಕ್ಕಾಗಿ  ಅಂಪೈರ್  ಅವರೊಂದಿಗೆ ವಾಗ್ವಾದ ನಡೆಸಿದರು.  ಎಸೆತವು  ಸರಿಯಾಗಿತ್ತು ಹಾಗೂ ಅದು  ಓವರ್‌ನ ಮೊದಲ ಬೌನ್ಸರ್ ಆಗಿತ್ತು ಎಂದು ಅಂಪೈರ್ ಹೇಳಿದರು.

ಇದನ್ನೂ ಓದಿ: ಹೊಸದಿಲ್ಲಿ: ಮೂವರು ಆರೋಪಿಗಳನ್ನು ಜೈಲು ಕಂಬಿ ಒಡೆದು ಬಿಡಿಸಿಕೊಂಡು ಪರಾರಿಯಾದ ದಕ್ಷಿಣ ಆಫ್ರಿಕಾ ಪ್ರಜೆಗಳು

Similar News