×
Ad

ಸಾರ್ವಜನಿಕ ಸ್ಥಳದಲ್ಲಿ ಫೆಲೆಸ್ತೀನ್ ಧ್ವಜ ಹಾರಿಸುವುದಕ್ಕೆ ಇಸ್ರೇಲ್ ನಿಷೇಧ

Update: 2023-01-09 23:47 IST

ಟೆಲ್‌ ಅವೀವ್, ಜ.9: ಸಾರ್ವಜನಿಕ ಸ್ಥಳದಲ್ಲಿ ಫೆಲೆಸ್ತೀನ್ ಧ್ವಜ ಹಾರಿಸುವುದನ್ನು ನಿಷೇಧಿಸುವಂತೆ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವರು ಪೊಲೀಸ್ ಇಲಾಖೆಗೆ ಆದೇಶಿಸಿದ್ದಾರೆ.

ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸುವಿಕೆಯನ್ನು ತೋರಿಸುವ ಫೆಲಸ್ತೀನ್ ಲಿಬರೇಷನ್ ಆರ್ಗನೈಸೇಷನ್‌ನ (ಪಿಎಲ್‌ಒ) ಯಾವುದೇ ಧ್ವಜವನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾರಿಸುವುದನ್ನು ನಿಷೇಧಿಸುವಂತೆ ಮತ್ತು ಇಸ್ರೇಲ್ ದೇಶದ ವಿರುದ್ಧ ಯಾವುದೇ ಪ್ರಚೋದನಾತ್ಮಕ ಕ್ರಮವನ್ನು ತಡೆಯುವಂತೆ ಆದೇಶಿಸಿದ್ದೇನೆ’ ಎಂದು ರಾಷ್ಟ್ರೀಯ ಭದ್ರತಾ ಸಚಿವ ಇತಮರ್ ಬೆನ್‌ಗ್ವಿರ್ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಇಸ್ರೇಲ್‌ನ ಅತಿಕ್ರಮಣದ ಬಗ್ಗೆ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡನೆಗೆ ಫೆಲೆಸ್ತೀನ್ ಒತ್ತಡ ಹೇರಿದ ಬಳಿಕ ಆ ದೇಶದ ವಿರುದ್ಧ ಇಸ್ರೇಲ್ ಸರಕಾರ ಕ್ಷಿಪ್ರ ಪ್ರತಿಕ್ರಮಕ್ಕೆ ಮುಂದಾಗಿದೆ. ಫೆಲಸ್ತೀನ್ ಆಡಳಿತಕ್ಕೆ ನೀಡಬೇಕಿರುವ ಸುಮಾರು 40 ದಶಲಕ್ಷ ಡಾಲರ್ ತೆರಿಗೆ ಆದಾಯವನ್ನು ತಡೆಹಿಡಿಯಲಾಗಿದ್ದು , ಅದನ್ನು ಫೆಲೆಸ್ತೀನ್ ಹೋರಾಟಗಾರರ ದಾಳಿಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ವಿತರಿಸುವುದಾಗಿ ಇಸ್ರೇಲ್‌ನ ಬೆಂಜಮಿನ್ ನೆತನ್ಯಾಹು ಸರಕಾರ ಘೋಷಿಸಿದೆ.

Similar News