ಫ್ಲೋರಿಡಾದಲ್ಲಿ ಗುಂಡಿನ ದಾಳಿ: 10 ಮಂದಿಗೆ ಗಾಯ

Update: 2023-01-31 17:14 GMT

ನ್ಯೂಯಾರ್ಕ್, ಜ.31: ಅಮೆರಿಕದಲ್ಲಿ ಸರಣಿ ಶೂಟೌಟ್ ಪ್ರಕರಣಗಳು ಮುಂದುವರಿದಿದ್ದು ಫ್ಲೋರಿಡಾ ನಗರದಲ್ಲಿ ಸೋಮವಾರ ಜನಸಮೂಹವನ್ನು ಗುರಿಯಾಗಿಸಿ ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದು ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.

ಸೋಮವಾರ ಸಂಜೆ 3:45ರ ವೇಳೆಗೆ ಫ್ಲೋರಿಡಾದ ಲೋವಾ ಅವೆನ್ಯೂ ನಾರ್ಥ್ ಪ್ರದೇಶಕ್ಕೆ ಕಾರಿನಲ್ಲಿ ಬಂದ 4 ದುಷ್ಕರ್ಮಿಗಳು ಅಲ್ಲಿದ್ದ ಜನರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಅವರು ಪರಾರಿಯಾದ ವಾಹನದ ಗುರುತನ್ನು ಪತ್ತೆಹಚ್ಚಲಾಗಿದ್ದು ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸ್ಯಾಮ್ ಟೇಲರ್ ಹೇಳಿರುವುದಾಗಿ ವರದಿಯಾಗಿದೆ.

Similar News